fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಡಿಸೆಂಬರ್ 31, 2017

ಕನ್ನಡಮ್ಮನ ಹರಕೆ

ಕನ್ನಡಕೆ ಹೋರಾಡು
ಕನ್ನಡದ ಕಂದಾ;
ಕನ್ನಡವ ಕಾಪಾಡು 
ನನ್ನ ಆನಂದಾ! 

ಜೋಗುಳದ ಹರಕೆಯಿದು 
ಮರೆಯದಿರು, ಚಿನ್ನಾ; 
ಮರೆತೆಯಾದರೆ ಅಯ್ಯೊ 
ಮರೆತಂತೆ ನನ್ನ! 

ಮೊಲೆಯ ಹಾಲೆಂತಂತೆ
ಸವಿಜೇನು ಬಾಯ್ಗೆ; 
ತಾಯಿಯಪ್ಪುಗೆಯಂತೆ 
ಬಲುಸೊಗಸು ಮೆಯ್ಗೆ; 

ಗುರುವಿನೊಳ್ನುಡಿಯಂತೆ 
ಶ್ರೇಯಸ್ಸು ಬಾಳ್ಗೆ; 
ತಾಯ್ನುಡಿಗೆ ದುಡಿದು ಮಡಿ, 
ಇಹಪರಗಳೇಳ್ಗೆ! 

ರನ್ನ ಪಂಪರ ನಚ್ಚು
ಕನ್ನಡದ ಸೊಲ್ಲು; 
ಬಸವದೇವನ ಮೆಚ್ಚು, 
ಹರಿಹರನ ಗೆಲ್ಲು; 

ನಾರಣಪ್ಪನ ಕೆಚ್ಚು 
ಬತ್ತಳಿಕೆ ಬಿಲ್ಲು; 
ಕನ್ನಡವ ಕೊಲುವ ಮುನ್ 
ಓ ನನ್ನ ಕೊಲ್ಲು! 

ನೆವವು ಏನಾದರೇನ್,
ಹೊರನುಡಿಯು ಹೊರೆಯೈ; 
ನಿನ್ನ ನಾಡೊಡೆಯ ನೀನ್; 
ವೈರಿಯನು ತೊರೆಯೈ.

ಕನ್ನಡದ ನಾಡಿನಲಿ 
ಕನ್ನಡವ ಮೆರೆಯೈ; 
ತಾಯ್ಗಾಗಿ ಹೋರಾಡಿ 
ತಾಯ್ನುಡಿಯ ಪೊರೆಯೈ! 

ಕನ್ನಡಕೆ ಬಂದಿಳಿಕೆ
ಹಿಡಿಯುತಿಹುದಿಂದು; 
ನೀ ನಿದ್ದೆ ಮಾಡಿದರೆ 
ಹಾಕುವುದು ಕೊಂದು! 

ಎದ್ದೇಳೊ, ಕಂದಯ್ಯ, 
ಕತ್ತಿಯನು ಕೊಳ್ಳೊ! 
ತಳಿರು ವೇಷದ ರೋಗ 
ಬಂದಿಳಿಕೆ, ತಳ್ಳೊ! 

ದಮ್ಮಯ್ಯ, ಕಂದಯ್ಯ,
ಬೇಡುವೆನು ನಿನ್ನ; 
ಕನ್ನಡಮ್ಮನ ಹರಕೆ, 
ಮರೆಯದಿರು, ಚಿನ್ನಾ! 

ಮರೆತೆಯಾದರೆ ಅಯ್ಯೊ, 
ಮರೆತಂತೆ ನನ್ನ; 
ಹೋರಾಡು ಕನ್ನಡಕೆ 
ಕಲಿಯಾಗಿ, ರನ್ನಾ! 

೫-೭-೧೯೩೬

ಶುಕ್ರವಾರ, ಡಿಸೆಂಬರ್ 29, 2017

ಕನ್ನಡ ಬರಹಗಾರ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅಕ ಕುವೆಂಪು ಅವರ 113 ನೇ ಹುಟ್ಟುಹಬ್ಬದ ಗೂಗಲ್ ಡೂಡಲ್





ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ,ಕಾದಂಬರಿಕಾರ,ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು
ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಗುರುವಾರ, ಡಿಸೆಂಬರ್ 28, 2017

ಕಥೆ - ಜೀವನ

ಕಥೆಗೊಂದು ಕಲ್ಪನೆ ಆತ್ಯಗತ್ಯ
ಅದರಂತೆ

ಜೀವನಕ್ಕೊಂದು ಗುರಿ ಆತ್ಯಗತ್ಯ.

ಭಾನುವಾರ, ಡಿಸೆಂಬರ್ 24, 2017

ರಜೆ

ವಿಷಯದಲ್ಲಿ ಮಾತ್ರ ಎಲ್ಲರ ಮಿತವ್ಯಯ ಬುದ್ಧಿ ಜಾಗೃತವಾಗುತ್ತದೆ
ಸರ್ಕಾರೀ ಉದ್ಯೋಗಿಗಳು ಸದಾಕಾಲ ಲೆಕ್ಕ ಹಾಕುವುದು ಇದನ್ನೇ
ನಗರ ಹೋಗು ಎನ್ನುತ್ತದೆ, ಊರು ಬಾ ಎನ್ನುತ್ತದೆ
ಕೆಲಸದ ದಿನಗಳಲ್ಲಿ ಇದರದ್ದೇ ಯೋಜನೆ, ನಂತರ ಮುಗಿದೇ ಹೋಯಿತಲ್ಲಾ ಎಂಬ ಯೋಚನೆ
ರೈತನಿಗಿಲ್ಲದ ಸುಖವಿದು
ಖಾಸಗೀ ಡಾಕ್ಟರ್ಗಳಿಗೆ ರಜದಲ್ಲೂ ಸಜವೇ
ರಾಜಾರೋಷವಾಗಿ ಕಳೆಯಬಹುದಾದ್ದು
ಶಾಪಿಂಗ್ ಹೋಗಲೆಂದೇ ಕೊಡಮಾಡುವ ಅವಕಾಶ
ಕೆಲಸ ಮಾಡದೇ ಆರಾಮ ಇರುವವರಿಗೂ ಸಿಗುವ ವಿರಾಮ
ವಿಷಯದಲ್ಲಿ ಯಾರಿಗೂ ವಿರಕ್ತಿ ಹುಟ್ಟಲಾರದು
ಎಷ್ಟಿದ್ದರೂ ಬೇಕು ಎನ್ನುವ ಪಟ್ಟಿಯಲ್ಲಿ ಇದಕ್ಕೆ ಮೊದಲ ಸ್ಥಾನ
ಭಾರತೀಯರು ವಾರವಿಡೀ ಕೆಲಸ ಮಾಡುವುದೇ ಇದಕ್ಕಾಗಿ
ಮಹಾತ್ಮರು ಸಾವಿನಲ್ಲೂ ಬೇರೆಯವರನ್ನು ಖುಷಿಗೊಳಿಸುತ್ತಾರೆ, ಕಾರಣ ಅವರ ಸಾವಿಗೆ ರಜೆ ಕೊಡಲಾಗುತ್ತದೆ
ವಾರಕ್ಕೊಮ್ಮೆ ಕೆಲಸಗಾರರಿಗೆ ರಜೆ ನೀಡುವುದು ಬಾಸ್ ಗೇ ಒಳ್ಳೆಯದು, ವಾರಕ್ಕೊಮ್ಮೆಯಾದರೂ ಕೆಲವರು ಸ್ನಾನ ಮಾಡಬೇಕಲ್ಲ...

-ವಿಶ್ವನಾಥ ಸುಂಕಸಾಳ

ಶನಿವಾರ, ಡಿಸೆಂಬರ್ 23, 2017

ರೈತರ ದಿನಾಚರಣೆ ಮರೆತಿದ್ದೀರಾ?

ಮರೆತೆಯಾ ಮನುಜ ನಮ್ಮನ್ನು ನಾವು ರೈತರು ಮಳೆ ಎನ್ನದೆ ಬಿಸಿಲೆನ್ನದೇ ವರ್ಷವಿಡೀ ನಿಮಗಾಗಿ ದುಡಿಯುವ ನಮ್ಮನ್ನು ಮರೆತೆಯಾ …

ನಿನಗೆ ಕ್ರಿಕೆಟಿಗರ ಬಳಿ ಎಷ್ಟು ವಾಹನ ಇದೆ ಗೊತ್ತು .
ಸಿನೆಮಾ ನಟರ ಮುಂದಿನ ಸಿನೆಮಾಗಳ ಬಗ್ಗೆ ಗೊತ್ತು ..
ನಿನ್ನ ಅಕ್ಕ ಪಕ್ಕದವರ ಬಗ್ಗೆ ಗೊತ್ತು .

ಆದರೆ ನಮಗಿರುವ ಗೋಳು ಸಾಲಗಳ ಬಗ್ಗೆ ನಿನಗೆ ಗೊತ್ತಿಲ್ವ ..

ಬೇರೆ ದಿನಾಚರಣೆಗಳ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವ ನೀವು ನಮ್ಮ ದಿನಾಚರಣೆ ಬಗ್ಗೆ ಗೊತ್ತಿಲ್ವಾ …

ಇಂದು ರೈತ ದಿನಾಚರಣೆ,
ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಇದು ಗೊತ್ತೇ ಇಲ್ಲ.
ಹೊಸ ವರ್ಷ,
ಪ್ರೇಮಿಗಳ ದಿನವನ್ನು ಆಚರಿಸಲು ತೋರುವ ಉತ್ಸಾಹವನ್ನು ಅನ್ನ ಕೊಡುವ ರೈತನ ದಿನಾಚರಣೆಯಂದು ತೋರದಿರುವುದು ನೋವಿನ ಸಂಗತಿ.

ಅನ್ನದಾತನಿಗೆ ಕೋಟಿ ಕೋಟಿ ನಮನಗಳು.

ನಾವು ಕನ್ನಡವನ್ನೇ ಮಾತನಾಡುತ್ತೇವೆ
ಹಾಗೂ
ಕನ್ನಡದ ಹುಡುಗ / ಹುಡುಗಿಯನ್ನೇ ಇಷ್ಟ ಪಡುತ್ತೇವೆ.

ಶುಕ್ರವಾರ, ಡಿಸೆಂಬರ್ 22, 2017

ತಾಯಿ ಭೂಮಿ ತಾಯಿ

ತಾಯಿ ಭೂಮಿ ತಾಯಿ
ಸದಯಿ ಅಭಯದಾಯಿ
ಮತ್ತೆ ನಿನ್ನ ಸ್ಪರ್ಶದಿಂದ
ಅಮಿತ ಹರ್ಷ ಮನಸಿಗೆ || ತಾಯಿ ||

ಬೆಂದವರಿಗೆ ಕಂಬನಿ
ನೊಂದವರಿಗೆ ತಂಬನಿ
ನಂಬಿ ಬಂದ ಭಾಗ್ಯ ಹೀನ
ಜನರ ಊರುಗೋಲು ನೀ || ತಾಯಿ ||

ಬಾಳಿನಲ್ಲಿ ಸುಯ್ಯುವ
ಗೋಳಿನಲ್ಲಿ ತುಯ್ಯುವ
ಹಗಲು ಇರುಳು ದುಡಿಯುವ
ಹಳ್ಳಿ ಜನರ ಶಾಂತಿ ನೀ || ತಾಯಿ ||

ಪ್ರಗತಿ ಗೀತ ಗಾಯಕಿ
ಚಿರಾನಂದದಾಯಕಿ
ಭಾಗ್ಯ ಮಾರ್ಗದಲ್ಲಿ ನಡೆವ
ಭಾರತಕ್ಕೆ ನಾಯಕಿ || ತಾಯಿ ||

ಸಾಹಿತ್ಯಕೆ. ಎಸ್. ನಿಸಾರ್ ಅಹಮದ್
ಸಂಗೀತ?
ಗಾಯನ ಎಂ ಡಿ ಪಲ್ಲವಿ
ಎಮ್ ಪಿ 3

ಬುಧವಾರ, ಡಿಸೆಂಬರ್ 20, 2017

ದಿನಚರಿ



ದಿನವು ಬೇಗ ಏಳಬೇಕು
ಎದ್ದು ಹಲ್ಲನುಜ್ಜಬೇಕು
ಉಜ್ಜಿ ಮುಖವ ತೊಳೆಯಬೇಕು
ದಿನವು ಸ್ನಾನ ಮಾಡ ಬೇಕು

ದೇವರಿಗೆ ನಮಸ್ಕರಿಸಿ
ತಿಂಡಿಯನ್ನು ತಿನ್ನಬೇಕು
ಗುರುವಿಗೆ ನಮಸ್ಕರಿಸಿ
ಶಾಲೆಯಲ್ಲಿ ಕಲಿಯಬೇಕು

ಶನಿವಾರ, ಡಿಸೆಂಬರ್ 09, 2017

ರಾಮಯಾಣದ ಸ್ವಾರಸ್ಯ ಸಂಗತಿಗಳು 2

ಸೇತುವೆ ಕಟ್ಟಲು ಎಷ್ಟು ದಿನ ಬೇಕಾಯ್ತು ?
    ಭಾರತ-ಶ್ರೀಲಂಕಾ ನಡುವೆ ಇರುವ ರಾಮಸೇತು ಒಡೆಯಲು ಎರಡು ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಅದನ್ನು ಕಟ್ಟಲು ರಾಮನ ಕಪಿಸೈನ್ಯ ತೆಗೆದುಕೊಂಡಿದ್ದು ಕೇವಲ ಐದು ದಿನ! ಸೇತುವೆಯನ್ನು ಕಟ್ಟಿದ್ದು ಕಪಿಸೈನ್ಯ ಎಂಬುದು ಕೂಡ ಪೂರ್ತಿ ನಿಜವಲ್ಲ. ಅದನ್ನು ನಿರ್ಮಿಸಿದ್ದು ರಾಮನ ಅಂತಃಶಕ್ತಿ. ಇಲ್ಲವಾದರೆ, ಯಾರಾದರೂ ಮಂಗಗಳನ್ನಿಟ್ಟುಕೊಂಡು ಸಮುದ್ರಕ್ಕೆ ಸೇತುವೆ ಕಟ್ಟಲು ಸಾಧ್ಯವೇ? ವಾಲ್ಮೀಕಿಗೆ ರಾಮನನ್ನು ಪವಾಡಪುರುಷನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡಿ (ಪುರುಷೋತ್ತಮ) ಜನರಿಗೆ ಆದರ್ಶವಾಗಿ ನೀಡಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು. ಹಾಗಾಗಿ ಕಪಿಗಳ ನೆರವಿನಿಂದ ರಾಮ ಸೇತುವೆ ಕಟ್ಟಿದ ಎಂಬಂತೆ ಬಿಂಬಿಸಿದರು. ಕೃಪೆ : ಕೆ.ಟಿ.ಆರ್

ಶುಕ್ರವಾರ, ಡಿಸೆಂಬರ್ 01, 2017

ದೂಧಗಂಗಾ ನದಿ

ದೂಧಗಂಗಾ ನದಿ ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದು.ಇದು ಪಶ್ಚಿಮ ಘಟ್ಟದ ಸಿಂಧುದುರ್ಗ ಎಂಬಲ್ಲಿ ಹುಟ್ಟುತ್ತದೆ.ಅಲ್ಲಿಂದ ಪೂರ್ವಾಭಿಮುಖವಾಗಿ ಹರಿದು ಮಹಾರಾಷ್ಟ್ರದ ಕೊಲ್ಲಾಪುರಜಿಲ್ಲೆ ಮತ್ತು ಕರ್ನಾಟಕದ ಬೆಳಗಾಂ ಜಿಲ್ಲೆಗಳಲ್ಲಿ ಹರಿದು ಕೃಷ್ಣಾ ನದಿಯನ್ನು ಸೇರುತ್ತದೆ.ಈ ನದಿಗೆ ಕೊಲ್ಲಾಪುರ ಜಿಲ್ಲೆಯಲ್ಲಿ ಆಣೆಕಟ್ಟು ಕಟ್ಟಿ ಕಾಳಮ್ಮವಾಡಿ ಜಲಾಶಯವನ್ನು ನಿರ್ಮಿಸಲಾಗಿದೆ.

ಮಂಗಳವಾರ, ನವೆಂಬರ್ 28, 2017

ಧರ್ಮ - ಅಧರ್ಮ


ಧರ್ಮ ಮತ್ತು ಅಧರ್ಮದ
ಯುದ್ದದಲ್ಲಿ ಮೊದಲಿಗೆ
ಅಧರ್ಮಕ್ಕೆ ಜಯ ಕಂಡರೂ
ಕೊನೆಯಲ್ಲಿ ಧರ್ಮವೇ ಗೆಲ್ಲುವುದು.

ಶುಕ್ರವಾರ, ನವೆಂಬರ್ 24, 2017

ತಿಳಿ

ಅರಿಯುವಿಕೆಯ ಪ್ರಕ್ರಿಯೆ
ಜ್ಞಾನಿಗಳ ತಳಿಯಲ್ಲಿ ಬರುವ ವಂಶವಾಹಿ
ತಿಳಿದವನು ಯಾವತ್ತೂ ತಿಳಿತಿಳಿಯಾಗಿರುತ್ತಾನೆ
ಹೆಚ್ಚು ತಿಳಿದಂತೆಲ್ಲ ಕಷ್ಟಗಳೇ ಹೆಚ್ಚು
ನಿಜವಾದ ತಿಳುವಳಿಕೆ ಮೂಡುವುದು ಕಲಿಯುವುದು ಬಿಟ್ಟ ಮೇಲೆಯೇ
ಕುತೂಹಲದ ಕಣ್ಣಿನವಗೆ ತಿಳಿಯಲು ಎಲ್ಲೆಲ್ಲೂ ಅವಕಾಶವಿರುತ್ತದೆ
ಹೆಚ್ಚು ತಿಳಿ, ಕಡಿಮೆ ಕಳಿ
ಅರಿತವಗೆ ಅರಿಗಳೆಲ್ಲ ದೂರ
ಅನಿವಾರ್ಯತೆ ಮತ್ತು ಸೋಲು ತಂದು ಕೊಡುವ ಬಳುವಳಿ
ತೊಡಲು ಅರಿವೆ ಇಲ್ಲದಿದ್ದರೂ ಅರಿವುದನು ಬಿಡಬಾರದು
ಬೇರೆಯವರು ನಿಮ್ಮನ್ನು ದಡ್ಡ ಎಂದು ಹಳಿಯುವುದನ್ನು ತಪ್ಪಿಸಲು ತಿಳಿದುಕೊಳ್ಳುವುದೊಂದೇ ಪರಿಹಾರ
ಹಳಿ ತಪ್ಪದಂತೆ ತಡೆಯುವ ತಡೆ ಗೋಡೆ
ತಿಳಿದವ ಬೆಳೆವ

-ವಿಶ್ವನಾಥ ಸುಂಕಸಾಳ

ಬುಧವಾರ, ನವೆಂಬರ್ 22, 2017

ಅಮ್ಮ ಹಚ್ಚಿದೊಂದು ಹಣತೆ

ಅಮ್ಮ ಹಚ್ಚಿದೊಂದು ಹಣತೆ
ಇನ್ನೂ ಬೆಳಗಿದೆ
ಮನಕೆ ಮಬ್ಬು ಕವಿಯದಂತೆ
ಸದಾ ಕಾದಿದೆ ।।

ಕಪ್ಪು ಕಡಲಿನಲ್ಲಿ ದೋಣಿ
ದಿಕ್ಕು ತಪ್ಪಲು
ದೂರದಲ್ಲಿ ತೀರವಿದೆ
ಎಂದು ತೋರಲು ।। ಅಮ್ಮ ।।

ಕೃತಕ ದೀಪ ಕತ್ತಲಲ್ಲಿ
ಕಳೆದು ಹೋಗದಂತೆ
ಸೂರ್ಯ ಚಂದ್ರ ತಾರೆಯಾಗಿ
ಹೊಳೆದು ಬಾಳುವಂತೆ ।। ಅಮ್ಮ ।।

ಅಂತರಂಗದಲ್ಲಿ ನೂರು
ಕಗ್ಗತ್ತಲ ಕೋಣೆ
ನಾದ ಬೆಳಕ ತುಂಬಲು
ಮಿಡಿದ ಹಾಗೆ ವೀಣೆ ।। ಅಮ್ಮ ।।

ಸಾಹಿತ್ಯ – M R ಕಮಲ
ಸಂಗೀತ – ಸಿ ಅಶ್ವಥ್
ಗಾಯನ – ಎಂ ಡಿ ಪಲ್ಲವಿ

ಸೋಮವಾರ, ನವೆಂಬರ್ 20, 2017

ಬೇಟೆಗಾರ ಬಂದ



ಬೇಟೆಗಾರ ಬಂದ
ಬಿಲ್ಲು ಬಾಣ ತಂದ

ಕಾಡು ಹಂದಿ ಕೊಂದ
ಬೆಂದ ಹಂದಿ ತಿಂದ

ಹೊಟ್ಟೆ ನೋವು ಅಂದ
ಮರದ ಕೆಳಗೆ ಬಿದ್ದ
 
ಹುಲಿರಾಯ ಬಂದ
ಹೊಟ್ಟೆ ತುಂಬ  ತಿಂದ
 
ಹುಲಿರಾಯ ಬಂದ
ಹೊಟ್ಟೆ ತುಂಬ ತಿಂದ

ಶನಿವಾರ, ನವೆಂಬರ್ 18, 2017

ಆಧಾರ್ ಕಾರ್ಡ್ (Aadhar Card)

ಈಗ ಎಲ್ಲದಕ್ಕೂ ಆಧಾರ್ ಕಾರ್ಡ್ ಎಂಬುದು ಆಧಾರವೇ ಆಗುತ್ತಿದೆ.


ಸಿಮ್ (ಮೊಬೈಲ್‌ಗೆ) ಲಿಂಕ್ ಮಾಡುವುದು
ಇದು ಕೂಡ ಕಡ್ಡಾಯ. ಸಿಮ್ ಕಾರ್ಡ್ ತೆಗೆದುಕೊಂಡಾಗಲೇ ಆಧಾರ್ ಕಾರ್ಡ್ ಮೂಲಕವೇ ಮೊಬೈಲ್ ನಂಬರ್ ಆ್ಯಕ್ಟಿವೇಶನ್ ಮಾಡಿದವರಿಗೆ ಇದರ ಅಗತ್ಯ ಇರುವುದಿಲ್ಲ. ತುಂಬಾ ಹಿಂದೆ ಸಿಮ್ ಕಾರ್ಡ್ ಖರೀದಿಸಿದವರು ಲಿಂಕ್ ಮಾಡಲೇಬೇಕು. ಏನು ಮಾಡಬೇಕೆಂದರೆ, ಆಧಾರ್ ಕಾರ್ಡ್‌ನ ಪ್ರತಿ ಹಾಗೂ ನಿಮ್ಮ ಮೊಬೈಲ್ ಫೋನ್ ಜತೆಗೆ ಆಯಾ ಮೊಬೈಲ್ ಕಂಪನಿಗಳ (ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಐಡಿಯಾ, ಜಿಯೋ ಮುಂತಾದ) ಸೇವಾ ಕೇಂದ್ರಗಳಿಗೆ ಹೋದರೆ ಅವರೇ ಲಿಂಕ್ ಮಾಡುತ್ತಾರೆ. ಮಧ್ಯವರ್ತಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಕೊಡಬೇಡಿ. ಸೇವಾ ಕೇಂದ್ರಗಳಲ್ಲಿ ನಿಮ್ಮ ಕೈಬೆರಳಿನ ಸ್ಕ್ಯಾನ್ ಮಾಡಲಾಗುತ್ತದೆ (ಇದು ಬಯೋಮೆಟ್ರಿಕ್ ಮಾಹಿತಿಯ ದೃಢೀಕರಣಕ್ಕಾಗಿ). ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಅಲ್ಲಿನ ಸಿಬ್ಬಂದಿಗೆ ಕೊಡಬೇಕು. ಒಂದೆರಡು ದಿನಗಳೊಳಗೆ ದೃಢೀಕರಣ ಸಂದೇಶ ಬರುತ್ತದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡುವುದು ಸಾಧ್ಯವಿಲ್ಲ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು
ಬ್ಯಾಂಕ್ ಖಾತೆ ಮತ್ತು ಮೊಬೈಲ್ ನಂಬರ್ ಒಂದನ್ನು ಬಿಟ್ಟು ಇನ್ನೊಂದು ಹೇಗೆ ಇರಲಾರದೋ, ಅದೇ ರೀತಿ ಈಗ ಆಧಾರ್ ಮತ್ತು ಬ್ಯಾಂಕ್ ಖಾತೆಗೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ಇದು ಅನಿವಾರ್ಯವೂ ಆಗಿದೆ. ಇದಕ್ಕಾಗಿ ಎಲ್ಲ ಬ್ಯಾಂಕುಗಳೂ ಕಾರ್ಯತತ್ಪರವಾಗಿದ್ದು, ಗ್ರಾಹಕರಿಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತಲೇ ಇವೆ. ನೆಟ್ ಬ್ಯಾಂಕಿಂಗ್ ವ್ಯವಸ್ಥೆಗೆ ನೋಂದಾಯಿಸಿಕೊಂಡವರು ಆನ್‌ಲೈನ್‌ನಲ್ಲಿಯೇ ಇವುಗಳನ್ನು ಲಿಂಕ್ ಮಾಡಿಕೊಳ್ಳಬಹುದು.

ನೆಟ್ ಬ್ಯಾಂಕಿಂಗ್ ಮೂಲಕ ಲಿಂಕಿಂಗ್ ಹೇಗೆ?
ನಿಮ್ಮ ಬ್ಯಾಂಕ್‌ನ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ. ಅದರ ಮೆನುವಿನಲ್ಲಿ ಆಧಾರ್ ಸೀಡಿಂಗ್, ಲಿಂಕ್ ಆಧಾರ್, ಆಧಾರ್ ಲಿಂಕಿಂಗ್ ಹೀಗೆ ಯಾವುದಾದರೂ ವಾಕ್ಯ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ನಮೂದಿಸಿ. ಆಧಾರ್‌ಗೆ ಅದಾಗಲೇ ಲಿಂಕ್ ಆಗಿರುವ ಮೊಬೈಲ್ ಫೋನ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ. ಆಧಾರ್ ವಿವರಗಳು ಕಾಣಿಸುತ್ತವೆ. ಆಧಾರ್‌ನಲ್ಲಿರುವ ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹೆಸರು, ಸ್ಪೆಲ್ಲಿಂಗ್ ಮತ್ತಿತರ ವಿವರಗಳು ತಾಳೆಯಾದರೆ ಲಿಂಕ್ ಆಗುತ್ತದೆ. ಇದು ಆನ್‌ಲೈನ್‌ನಲ್ಲಿ ನೀವೇ ಮಾಡಿಕೊಳ್ಳಬಹುದಾದ ವಿಧಾನ. ನೆಟ್ ಬ್ಯಾಂಕಿಂಗ್ ಖಾತೆ ಇಲ್ಲದಿದ್ದವರು ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಹೋಗಿ, ನಿಗದಿತ ಅರ್ಜಿಯನ್ನು ತುಂಬಿದರೆ ಬ್ಯಾಂಕ್ ಖಾತೆ ಮತ್ತು ಆಧಾರ್ ಲಿಂಕ್ ಮಾಡಲಾಗುತ್ತದೆ. ಸರಕಾರದಿಂದ ಬರುವ ಯಾವುದೇ ರೀತಿಯ ಸವಲತ್ತುಗಳು ನಗದು ರೂಪದಲ್ಲಿ ಬರಬೇಕಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದು ಕಡ್ಡಾಯ.

ಆಧಾರ್ ಲಿಂಕ್: ಈ ಡೆಡ್‌ಲೈನ್ ನೆನಪಿಡಿ
*ಡಿಸೆಂಬರ್ 31, 2017*
  1. ಪ್ಯಾನ್ ಕಾರ್ಡ್,
  2. ಬ್ಯಾಂಕ್ ಖಾತೆಗಳು,
  3. ಪಿಪಿಎಫ್,
  4. ಪೋಸ್ಟ್ ಆಫೀಸ್ ಖಾತೆ,
  5. ಕಿಸಾನ್ ವಿಕಾಸಪತ್ರ,
  6. ನ್ಯಾಷನಲ್ ಸೇವಿಂಗ್ಸ್ ಸ್ಕೀಮ್,
  7. ಮ್ಯೂಚುವಲ್ ಫಂಡ್,
  8. ಎಲ್‌ಪಿಜಿ,
  9. ಪಿಂಚಣಿ ಯೋಜನೆಗಳು,
  10. ವಿದ್ಯಾರ್ಥಿ ವೇತನ
*ಫೆಬ್ರವರಿ 06, 2018*
ಮೊಬೈಲ್ ಸಿಮ್ ಕಾರ್ಡ್
***************************************
      ಈಗಿನ ಡಿಜಿಟಲ್ ಯುಗದ ಅನಿವಾರ್ಯತೆಗಳು ಪದೇ ಪದೇ ಮೊಬೈಲ್ ನಂಬರ್ ಬದಲಾಯಿಸದಂತೆಯೂ ನಿಮ್ಮನ್ನು ಕಟ್ಟಿ ಹಾಕುತ್ತಿವೆ. ಯಾಕೆಂದರೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿಗೆ ಈ ಮೊಬೈಲ್ ನಂಬರ್‌ನ ಅಗತ್ಯವಿರುತ್ತದೆ. ಹೀಗಾಗಿ ಭಾರಿ ಆಫರ್‌ಗಳಿಗೆ ಮನಸೋತು ಸಿಮ್ ಕಾರ್ಡ್ ತೆಗೆದುಕೊಳ್ಳುವ ಮೊದಲು, ಒಂದು ಸಿಮ್ ಕಾರ್ಡ್ (ಮೊಬೈಲ್ ನಂಬರ್) ಶಾಶ್ವತವಾಗಿ ಇರುವಂತೆ ನೋಡಿಕೊಳ್ಳುವುದು ಈಗಿನ ಅಗತ್ಯ.

ಸೂಚನೆ: ಡೆಡ್‌ಲೈನ್ ಬಂದಾಗ ವಿಪರೀತ ಜನಜಂಗುಳಿ ಇರುವುದರಿಂದ ಈಗಲೇ ಇವನ್ನು ಮಾಡಿಸಿಟ್ಟುಕೊಳ್ಳಿ, ನೆಮ್ಮದಿಯಿಂದಿರಿ.
(ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ By ಅವಿನಾಶ್ ಬಿ. For 13 Nov 2017)