fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಏಪ್ರಿಲ್ 01, 2016

ಕಾಂಗೊ ನದಿ

ಕಾಂಗೊ ನದಿ ಮಧ್ಯ ಆಫ್ರಿಕಾದ ಪಶ್ಚಿಮ ಪಾರ್ಶ್ವದಲ್ಲಿನ ಅತಿ ಉದ್ದವಾದ ನದಿ. ಸುಮಾರು ೪,೭೦೦ ಕಿ.ಮೀ. ಉದ್ದಕ್ಕೆ ಹರಿಯುವ ಕಾಂಗೊ ನದಿಯು ನೈಲ್ ನದಿಯ ನಂತರ ಆಫ್ರಿಕದ ಎರಡನೆಯ ಅತಿ ದೊಡ್ಡ ನದಿಯಾಗಿದೆ. ಈ ನದಿ ಮತ್ತದರ ಉಪನದಿಗಳು ಜಗತ್ತಿನ ಎರಡನೆಯ ಅತಿ ವಿಸ್ತಾರವಾದ ಮಳೆಕಾಡಿನ ಮೂಲಕ ಹರಿಯುತ್ತವೆ. ಅಲ್ಲದೆ ಪ್ರತಿ ಸೆಕೆಂಡಿಗೆ ೧೪,೭೬,೩೭೬ ಘನ ಅಡಿಗಳಷ್ಟು ನೀರನ್ನು ಸಾಗಿಸುವ ಕಾಂಗೊ ನದಿಯು ಅಮೆಜಾನ್ ನದಿಯ ನಂತರ ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ವಿಷುವದ್ರೇಖೆಯ ಆಸುಪಾಸಿನಲ್ಲಿ ಹರಿಯುವ ಕಾರಣದಿಂದಾಗಿ ಈ ಕಾಂಗೊ ನದಿಯಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಸರಿಸುಮಾರು ಸ್ಥಿರ ಮತ್ತು ಏಕಪ್ರಮಾಣದದ ಹರಿವನ್ನು ಹೊಂದಿದೆ. ನದಿಯ ಸಾಗರಮುಖದಲ್ಲಿ ಸ್ಥಾಪಿತವಾಗಿದ್ದ ಪ್ರಾಚೀನ ಕಾಂಗೊ ಅರಸೊತ್ತಿಗೆಯಿಂದ ನದಿಯು ತನ್ನ ಹೆಸರನ್ನು ಪಡೆದಿದೆ. ನದಿಯ ದಂಡೆಯಲ್ಲಿರುವ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ನದಿಯ ಹೆಸರನ್ನೇ ಇಟ್ಟುಕೊಂಡಿವೆ.
ಪೂರ್ವ ಆಫ್ರಿಕಾದ ಪರ್ವತಪ್ರಾಂತ್ಯ ಮತ್ತು ಎತ್ತರದ ಪ್ರದೇಶವು ಕಾಂಗೊ ನದಿಯ ಉಗಮಸ್ಥಾನ. ಹೊರತಾಗಿ ನದಿಗೆ ಗಣನೀಯ ಪ್ರಮಾಣದಲ್ಲಿ ನೀರು ಟಾಂಗನ್ಯೀಕಾ ಮತ್ತುಎಮ್ವೇರು ಸರೋವರಗಳಿಂದ ಸಹ ಹರಿದು ಬರುವುದು. ಈ ಸರೋವರಗಳಿಂದ ಹೊರಹೊರಟ ನೀರಿನ ತೊರೆ ಲುವಾಲಾಬಾ ನದಿಯೆಂದು ಹೆಸರಾಗಿ ಮುಂದೆ ಬೊಯೋಮಾ ಜಲಪಾತದ ತಳದಿಂದ ಮುಂದಕ್ಕೆ ಕಾಂಗೊ ನದಿಯೆಂದು ಕರೆಯಿಸಿಕೊಳ್ಳುವುದು. ಜಾಂಬಿಯ ಚಾಂಬೇಶಿ ನದಿಯು ಕೂಡ ಕಾಂಗೊ ನದಿಯ ಉಪನದಿಯೆಂದು ಪರಿಗಣಿಸಲ್ಪಡುವುದು.
ಬೊಯೋಮಾ ತಡಸಲಿನ ತಳದಿಂದ ಕಾಂಗೊ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವ ಕಾಂಗೊ ನದಿಯು ಆಗ್ನೇಯಕ್ಕೆ ತಿರುಗಿ ಉಬಾಂಗಿ ನದಿಯನ್ನು ಕೂಡುವುದು. ಅಲ್ಲಿಂದ ಮುಂದೆ ಮಲೇಬೋ ಸರಸ್ಸಿನ ಮೂಲಕ ಹಾದು ಗಣನೀಯವಾಗಿ ಕಿರಿದಾಗಿ ತೀವ್ರ ಆಳವಾದ ಕೊಳ್ಳಕ್ಕೆ ಧುಮುಕುವುದು. ಈ ಸ್ಥಾನಗಳೆಲ್ಲವೂ ಒಟ್ಟಾಗಿ ಲಿವಿಂಗ್‍‍ಸ್ಟನ್ ಜಲಪಾತವೆಂದು ಕರೆಯಲ್ಪಡುವುವು. ಕೊನೆಯಲ್ಲಿ ಮುವಾಂಡಾ ಎಂಬ ಸಣ್ಣ ಪಟ್ಟಣದ ಬಳಿ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರವನ್ನು ಸೇರುವುದು.
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದ ನದಿಯ ಹಾದಿ
ಕಾಂಗೊ ನದಿಯ ಹೆಚ್ಚಿನ ಭಾಗವು ಒಳನಾಡ ನೌಕಾಯಾನಕ್ಕೆ ಅನುವಾಗಿದೆ. ಲಿವಿಂಗ್‍‍ಸ್ಟನ್ ಜಲಪಾತದ ಕಾರಣದಿಂದಾಗಿ ನದಿಯ ಪೂರ್ಣ ಉದ್ದಕ್ಕೆ ನೌಕಾಯಾನ ಅಸಾಧ್ಯ. ಕಿನ್ಶಾಸಾ ಮತ್ತು ಕಿಸಂಗಾನಿಗಳ ನಡುವೆ ನೌಕಾಯಾನ ಅತಿ ಜನಪ್ರಿಯ ಪ್ರಯಾಣ ವ್ಯವಸ್ಥೆಯಾಗಿದೆ. ಈ ಪ್ರದೇಶದ ಮುಖ್ಯ ವಾಣಿಜ್ಯ ಸರಕಾದ ತಾಮ್ರದ ಅದಿರಿನ ಹೆಚ್ಚಿನ ಪ್ರಮಾಣದ ಸಾಗಾಣಿಕೆ ಕಾಂಗೊ ನದಿಯ ಮೂಲಕವೇ ನಡೆಯುವುದು. ಉಳಿದಂತೆ ಜಲವಿದ್ಯುತ್ತಿನ ಮೂಲವಾಗಿ ಸಹ ಕಾಂಗೊ ನದಿಯು ಪ್ರಾಮುಖ್ಯ ಪಡೆಯುತ್ತಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡದೆನ್ನಲಾಗಿರುವ ಇಂಗಾ ಜಲವಿದ್ಯುತ್ ಯೋಜನೆಯಿಂದ ಅಂತಿಮವಾಗಿ ೪೦ ಗಿಗಾವ್ಯಾಟ್ ಗಳಷ್ಟು ವಿದ್ಯುತ್ತನ್ನು ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು