fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಡಿಸೆಂಬರ್ 31, 2016

ಅಂತಿಮ ನಮನ (Last Se-lute)

ಸಾವಿರದ ಸರದಾರ
ನಾನೆಂದು ಮೆರೆಯುತ್ತ
ಕೈ ಹಿಡಿದ ನೇತಾರರ
ಗೊಂಬೆಯಂತೆ ಆಡಿಸುತ್ತ
ಕೈಗೆಟುಕದವರನ್ನು
ನಿರ್ದಯದಿ ಕಾಡುತ್ತ
ಬೆನ್ನು ಹತ್ತಿದವರನೆಲ್ಲ
ಅಡ್ಡ ದಾರಿ ಹಿಡಿಸುತ್ತ
ಕಾಳಧನಿಕರ ಮನೆಯಲಿ
ಕಸದಂತೆ ಕೊಳೆಯುತ್ತ
ದಂಧೆಕೋರರ ಜೊತೆಗೆ
ತಕಥೈ ಎಂದು ಕುಣಿಯುತ್ತ
ಬಡವರ ಬಳಿ ಬರಲು
ಹಿಂದೇಟು ಹಾಕುತ್ತ
ಹಮ್ಮು ಬಿಮ್ಮಿನಲಿ
ರಾರಾಜಿಸುತ್ತಿದ್ದ
ಹಳೆಯ ನೋಟಿಗೆ
(ಅ)ಭಾವಪೂರ್ಣ ಶ್ರದ್ಧಾಂಜಲಿ

ಕೃಪೆ -ಹೊ.ರಾ.ಪ
ರುದ್ರಪಟ್ಟಣ,ಅರಕಲಗೂಡು ತಾಲ್ಲೂಕು (ಪ್ರಜಾವಾಣಿ)

ಕನ್ನಡವೆಂದರೆ

ಕನ್ನಡವೆಂದರೆ ಎಂತಹದು
ಕನ್ನಡವೆಂದರೆ ಎಂತಹದು ಮಗು
ಕನ್ನಡವೆಂದರೆ ಎಂತಹದು ನಮ್ಮ ಕನ್ನಡವೆಂದರೆ ಎಂತಹದು

ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕೇಳುವ ಕಿವಿಗೆ ಕಿಣಿ ಕಿಣಿ ಕಿಣಿ ಗೆಜ್ಜೆ
ಕನ್ನಡವೆಂದರೆ ಬಲು ಇಂಪು
ಕನ್ನಡವೆಂದರೆ ಬಲು ಇಂಪು
ಹೇಳುವ ನಾಲಿಗೆಗೆ ಇದು ಜೇನು
ಹೇಳುವ ನಾಲಿಗೆಗೆ ಇದು ಜೇನು
ಕನ್ನಡವೆಂದರೆ ಬಲು ತಂಪು
ಕನ್ನಡವೆಂದರೆ ಬಲು ತಂಪು
ಕನ್ನಡವೆಂದರೆ ಇಂತಹದು
ಕನ್ನಡವೆಂದರೆ ಇಂತಹುದು
ಕನ್ನಡವೆಂದರೆ ಇಂತಹದು ನಮ್ಮ
ಕನ್ನಡವೆಂದರೆ ಇಂತಹುದು ಮಗು
ಕನ್ನಡವೆಂದರೆ ಇಂತಹುದು
ಕಾಣುವ ಕಣ್ಣಿಗೆ ಮುತ್ತಿನ ಮಾಲೆ
ಕನ್ನಡ ಅಕ್ಷರ ಕಡು ಚೆಲುವು
ಕಾಣುವ ಕಣ್ಣಿಗೆ ಮುತ್ತಿನ ಮಾಲೆ
ಕನ್ನಡ ಅಕ್ಷರ ಕಡು ಚೆಲುವು
ಸಾವಿರ ಕಾಲ ಬಾಳಿದ ಕನ್ನಡ
ಸಾವಿರ ಕಾಲ ಬಾಳಿದ ಕನ್ನಡ
ಕನ್ನಡ ನಮ್ಮದಕಿದೆ ಬಲವು
ಕನ್ನಡವೆಂದರೆ ಇಂತಹದು
ಕನ್ನಡವೆಂದರೆ ಇಂತಹುದು
ಕನ್ನಡವೆಂದರೆ ಇಂತಹದು ನಮ್ಮ
ಕನ್ನಡವೆಂದರೆ ಇಂತಹುದು ಮಗು
ಕನ್ನಡವೆಂದರೆ ಇಂತಹುದು
--ಜಿ.ಪಿ.ರಾಜರತ್ನ೦

ಸೋಮವಾರ, ಡಿಸೆಂಬರ್ 26, 2016

ಉರಿಲಿಂಗಪೆದ್ದಿ

ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
ಕಾಲ: 1160
ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160.
ಕಳ್ಳತನ ಮಾಡುತಿದ್ದ ಪೆದ್ದಿ ಉರಿಲಿಂಗದೇವನ ಶಿಷ್ಯನಾಗಿ ಅವನ ನಂತರ ಅದೇ ಪೀಠದ ಮುಖ್ಯಸ್ಥನಾದ. ಅಸ್ಪೃಶ್ಯ ಜನಾಂಗದ ಪೆದ್ದಿ ವಿದ್ವಾಂಸನಾಗಿ, ಅನುಭಾವಿಯಾಗಿ, ಮಠದ ಮುಖ್ಯಸ್ಥನೂ ಆದದ್ದು ಆ ಕಾಲದ ಮಹತ್ವದ ಸಂಗತಿ. ಈತನ 366 ವಚನಗಳು ದೊರೆತಿವೆ. ಕರ್ನಾಟಕದಲ್ಲಿರುವ ಅಸ್ಪೃಶ್ಯ ಜನಾಂಗಗಳಿಗೆ ಸೇರಿದ ಮಠಗಳನ್ನು ಉರಿಲಿಂಗಪೆದ್ದಿಗಳ ಮಠವೆಂದೇ ಕರೆಯುವ ರೂಢಿ ಇದೆ.

ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ
ಎನಗೆ ಸಾಲೋಕ್ಯಪದವಯ್ಯಾ.
ನಿಮ್ಮ ಶರಣರ ಅರ್ಚನೆ ಪೂಜೆಯೇ
ಎನಗೆ ಸಾಮೀಪ್ಯಪದವಯ್ಯಾ.
ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ
ಎನಗೆ ಸಾರೂಪ್ಯಪದವಯ್ಯಾ.
ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ
ಎನಗೆ ಸಾಯುಜ್ಯಪದವಯ್ಯಾ.
ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ಭಾನುವಾರ, ಡಿಸೆಂಬರ್ 25, 2016

ಭಾರತದ ಬಸ್ಟರ್ಡ್


ಕ್ರಿಸ್ಮಸ್ (ಯೇಸುಕ್ರಿಸ್ತ) christmas


ಕ್ರಿಸ್ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. ಜುಡಾಯಿಸಮ್ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್ನ ವಂಶದಲ್ಲಿ ಮೆಸ್ಸಾಯ (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ.


ದಿನಾಂಕ
ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ಜಪಾನ್ ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ ಎರಡನೆ ಶತಮಾನ ದಿಂದ ಆರಂಭವಾಯಿತು. ಕ್ರೈಸ್ತ ಚರ್ಚ್ ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ ಡಿಸೆಂಬರ್ ೨೫ ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ.

ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು ಎಪಿಫನಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಕ್ರಿಸ್ಮಸ್ ಹೊಸ ವರ್ಷದ ಸಮೀಪ ಬರುವುದರಿಂದ ಕ್ರಿಸ್ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು.

ನಂಬಿಕೆಗಳು ಮತ್ತು ಆಚರಣೆಗಳು
ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ. 
ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು 
ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು 
ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು 
ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು 

ಸಾಂಟಾ ಕ್ಲಾಸ್
ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. "ಸಾಂಟಾ ಕ್ಲಾಸ್" ಎಂಬುದು "ಸಂತ ನಿಕೋಲಾಸ್" ಎಂಬುದರ ಅಪಭ್ರಂಶ. ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.

ಅಲಂಕಾರಗಳು
ಎಲ್ಲ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ "ಹಿಮದ ಮನುಷ್ಯ" ಮೊದಲಾದ ಅಲಂಕಾರಗಳೂ ಸಾಮಾನ್ಯ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ.
ಸಾಮಾಜಿಕ ಆಚರಣೆಗಳು
ಕ್ರಿಸ್ಮಸ್ಗೆ ಸಂಬಂಧಪಟ್ಟ ಆಚರಣೆಗಳು ಡಿಸೆಂಬರ್ ತಿಂಗಳ ಆರಂಭದಲ್ಲಿ ಅಡ್ವೆಂಟ್ ನಿಂದ ಆರಂಭವಾಗುತ್ತವೆ - ಇದು ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬ. ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ (ಕ್ರಿಸ್ಮಸ್ ಕ್ಯಾರಲ್). ಕ್ರಿಸ್ಮಸ್ ಔತಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ವಿಶಿಷ್ಟವಾದ ತಿನಿಸುಗಳುಂಟು. ಈ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ಒಂದಿ ವಿಶಿಷ್ಟ ಅನುಭೂತಿ ಇದೆ.
ಧಾರ್ಮಿಕ ಆಚರಣೆಗಳು
ಅಡ್ವೆಂಟ್ ಶುರುವಾಗುತ್ತಿದ್ದಂತೆ ಚರ್ಚುಗಳು ಕ್ರಿಸ್ಮಸ್ಸಿಗೆ ತೆರೆದುಕೊಳ್ಳುತ್ತವೆ. ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ಗಳಲ್ಲಿ ನಡೆಯುತ್ತವೆ. ಕ್ರಿಸ್ಮಸ್ ನಂತರ ಹನ್ನೆರಡನೆ ದಿನದಂದು "ಎಪಿಫನಿ" ಆಚರಣೆಗಳ ನಂತರ ಕ್ರಿಸ್ಮಸ್ ಕಾಲ ಮುಗಿಯುತ್ತದೆ.

ಕೃಪೆ: ವಿಕೀಪಿಡಿಯಾ ಕನ್ನಡ

ಶನಿವಾರ, ಡಿಸೆಂಬರ್ 24, 2016

ರಜೆ



ವಿಷಯದಲ್ಲಿ ಮಾತ್ರ ಎಲ್ಲರ ಮಿತವ್ಯಯ ಬುದ್ಧಿ ಜಾಗೃತವಾಗುತ್ತದೆ
ಸರ್ಕಾರೀ ಉದ್ಯೋಗಿಗಳು ಸದಾಕಾಲ ಲೆಕ್ಕ ಹಾಕುವುದು ಇದನ್ನೇ
ನಗರ ಹೋಗು ಎನ್ನುತ್ತದೆ, ಊರು ಬಾ ಎನ್ನುತ್ತದೆ
ಕೆಲಸದ ದಿನಗಳಲ್ಲಿ ಇದರದ್ದೇ ಯೋಜನೆ, ನಂತರ ಮುಗಿದೇ ಹೋಯಿತಲ್ಲಾ ಎಂಬ ಯೋಚನೆ
ರೈತನಿಗಿಲ್ಲದ ಸುಖವಿದು
ಖಾಸಗೀ ಡಾಕ್ಟರ್ಗಳಿಗೆ ರಜದಲ್ಲೂ ಸಜವೇ
ರಾಜಾರೋಷವಾಗಿ ಕಳೆಯಬಹುದಾದ್ದು
ಶಾಪಿಂಗ್ ಹೋಗಲೆಂದೇ ಕೊಡಮಾಡುವ ಅವಕಾಶ
ಕೆಲಸ ಮಾಡದೇ ಆರಾಮ ಇರುವವರಿಗೂ ಸಿಗುವ ವಿರಾಮ
ವಿಷಯದಲ್ಲಿ ಯಾರಿಗೂ ವಿರಕ್ತಿ ಹುಟ್ಟಲಾರದು
ಎಷ್ಟಿದ್ದರೂ ಬೇಕು ಎನ್ನುವ ಪಟ್ಟಿಯಲ್ಲಿ ಇದಕ್ಕೆ ಮೊದಲ ಸ್ಥಾನ
ಭಾರತೀಯರು ವಾರವಿಡೀ ಕೆಲಸ ಮಾಡುವುದೇ ಇದಕ್ಕಾಗಿ
ಮಹಾತ್ಮರು ಸಾವಿನಲ್ಲೂ ಬೇರೆಯವರನ್ನು ಖುಷಿಗೊಳಿಸುತ್ತಾರೆ, ಕಾರಣ ಅವರ ಸಾವಿಗೆ ರಜೆ ಕೊಡಲಾಗುತ್ತದೆ
ವಾರಕ್ಕೊಮ್ಮೆ ಕೆಲಸಗಾರರಿಗೆ ರಜೆ ನೀಡುವುದು ಬಾಸ್ ಗೇ ಒಳ್ಳೆಯದು, ವಾರಕ್ಕೊಮ್ಮೆಯಾದರೂ ಕೆಲವರು ಸ್ನಾನ ಮಾಡಬೇಕಲ್ಲ...
-ವಿಶ್ವನಾಥ ಸುಂಕಸಾಳ

ಗುರುವಾರ, ಡಿಸೆಂಬರ್ 22, 2016

ಅಮ್ಮನ ತೋಟ



ಅಮ್ಮ ನೀ ನೆಟ್ಟ ಸಸಿಗಳೆಲ್ಲ ಮರವಾಗಿದೆ
ಮರವಾಗಿ ಬೆಳೆದು ಫಲ ನೀಡಿದೆ
ನಿನ್ನ ಎದೆಯ ತೋಟದಿ ಬೆಳೆದ ಗಿಡಗಳು
ಹೂ ಬಿಟ್ಟಿವೆ, ಪರಿಮಳ ಚೆಲ್ಲಿದೆ

ನೀ ಹಸಿದು ಗಿಡಕೆ ಉಣಿಸಿ ಬೆಳೆಸಿದ ತೋಟ
ಬಾನಿನೆತ್ತರಕೆ ಬೆಳೆದು ನಿ೦ತ ಮರಗಳಿ೦ದ ತು೦ಬಿದೆ
ನೀ ಹಚ್ಹಿಟ್ತ ಹಣತೆ ಬೆಳಗಿ ನ೦ದಾದೀಪವಾಗಿದೆ
ದೀಪಗಳೇ ಎಷ್ಟೊ ಜನರ ದಾರಿ ದೀಪವಾಗಿದೆ

ನೀ ಕಟ್ಟಿದ ಗೂಡು ಇನ್ನೂ ಭದ್ರವಾಗಿದೆ
ನೀ ತುತ್ತಿಟ್ಟು ಬೆಳೆಸಿದ ಹಕ್ಕಿಗಳು ರೆಕ್ಕೆ ಪುಕ್ಕ ಬ೦ದು ಹಾರಾಡಿದೆ
ವಲಸೆ ಹೋದ ಹಕ್ಕಿಗಳು ತಮ್ಮ ಮರಿಗಳೊಡಗೂಡಿ
ಆಗೊಮ್ಮೆ ಈಗೊಮ್ಮೆ ಗೂಡಿಗೆ ಬ೦ದು ನಲಿದಿವೆ

ಏನೇ ಇದ್ದರೂ ಒ೦ದು ಕೊರಗಿದೆ
ಫಲಭರಿತ ತೋಟವ ನೋಡಲು ನೀನಿಲ್ಲ
ತೋಟದ ಮರಗಿಡದಲಿ ಹಕ್ಕಿಗಳ ಕಲರವ ಕೇಳಲು ನೀನಿಲ್ಲ
ನೀ ಹಚ್ಹ್ಹಿದ ಹಣತೆಯ ಬೆಳಕು ನಮಗೆ ದಾರಿದೀಪ
ದೀಪ ಆಗಲಿ ನ೦ದಾ ದೀಪ
Posted by ಎನ್. ಸ್ವಾಮಿನಾಥನ್.

ಮಂಗಳವಾರ, ಡಿಸೆಂಬರ್ 20, 2016

ತೋಟಕೆ ಹೋಗೊ ತಿಮ್ಮ..

ತೋಟಕೆ ಹೋಗೊ ತಿಮ್ಮ
ತೋಳ ಬಂದೀತಮ್ಮ
ಹಸು ಮೇಯ್ಸೋ ತಿಮ್ಮ
ಹಸು ಹಾದೀತಮ್ಮ
ಒಲೆ ಉರಿಸೊ ತಿಮ್ಮ
ಉರಿ ಸುಟ್ಟೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ
ಹೂವು ಬಿಡಿಸೊ ತಿಮ್ಮ
ಹಾವು ಕಚ್ಚೀತಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ
ನೀರು ಸೇದೊ ತಿಮ್ಮ
ಕೈ ನೋವು ಅಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆ ಅಮ್ಮ

ಬುಧವಾರ, ಡಿಸೆಂಬರ್ 14, 2016

ಬಾಗಳಿ ಕಲ್ಲೇಶ್ವರ

ಟಿ.ಎಂ. ಸತೀಶ್
ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಿಂದ 8 ಕಿಮೀ ದೂರದಲ್ಲಿರುವ ಪುಟ್ಟಗ್ರಾಮ ಬಗಲಿ ಅಥವಾ ಬಾಗಳಿ.  ಹಿಂದೆ ಬಳ್ಗುಲಿ ಎಂದು ಹೆಸರಾಗಿದ್ದ ಈ ಗ್ರಾಮ ಹೊಯ್ಸಳರ 2ನೇ ಬಲ್ಲಾಳನ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು ಎಂದೂ ತಿಳಿದುಬರುತ್ತದೆ.
ಇಲ್ಲಿರುವ ಕಲ್ಯಾಣ ಚಾಳುಕ್ಯರ ಕಾಲದ ಕಲ್ಲೇಶ್ವರ ದೇವಾಲಯ ಕಲಾತ್ಮಕವಾಗಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ.  ಕೆರೆಯ ಏರಿಯ ಮೇಲಿರುವ ಈ ದೇವಾಲಯದಲ್ಲಿ ಕಲಾತ್ಮಕ ಕೆತ್ತನೆಗಳಿಂದ ಕೂಡಿದ 64 ಬಳಪದ ಕಲ್ಲಿನ ನುಣುಪಾದ ಕಂಬಗಳಿವೆ. ಈ ಎಲ್ಲ ಕಂಬಗಳೂ ಒಂದಕ್ಕಿಂತ ಒಂದು ಭಿನ್ನವಾದ ಕಲಾಶ್ರೀಮಂತಿಕೆಯಿಂದ ಕೂಡಿದ್ದು ವೈವಿಧ್ಯಮಯವಾಗಿವೆ. ನಕ್ಷತ್ರಾಕಾರ, ವರ್ತುಲಾಕಾರ, ಷಟ್ಕೋಣಾಕಾರ, ಚೌಕಾರಾರ ಹೀಗೆ ವಿವಿಧ ರೂಪದಲ್ಲಿರುವ ತಲಾ 8 ಅಡಿ ಎತ್ತರದ ಕಂಬಗಳ ಪೈಕಿ ಕೆಲವು ಕಂಬಗಳ ಕೆಳಭಾಗದಲ್ಲಿ ಲತೆಗಳು ಹಾಗೂ ಲತಾಂಗಿಯರ ನರ್ತನ ಶಿಲ್ಪಗಳು, ಶಿಲ್ಪಿಯ ನೈಪುಣ್ಯತೆಗೆ ಹಿಡಿದ ಕನ್ನಡಿಯಾಗಿವೆ.
ವಿಶಾಲವಾದ ಕಲ್ಲೇಶ್ವರ ದೇಗುಲದ ಮುಖಮಂಟಪ ಮನೋಹರವಾಗಿದೆ. ಮಹಾಮಂಟಪದಲ್ಲಿ 3 ಅಡಿ ಎತ್ತರದ ಸುಂದರ ನಂದಿಯ ವಿಗ್ರಹವಿದೆ. ಛಾವಣಿಯಲ್ಲಿ ಅಷ್ಟದಿಕ್ಪಾಲಕರ ಉಬ್ಬುಶಿಲ್ಪಗಳಿವೆ. ಗರ್ಭಗೃಹದಲ್ಲಿರುವ ಶಿವಲಿಂಗದ ಕೆತ್ತನೆಯೂ ಮೋಹಕವಾಗಿದೆ.ಮಪ್ರಾಕಾರದಲ್ಲಿ ಹಾಗೂ ಮಹಾಮಂಟಪದಲ್ಲಿ ಅನೇಕ ಸುಂದರವಾದ ವಿಗ್ರಹಗಳಿವೆ.
ಭಿತ್ತಿಗಳಲ್ಲಿ ಕಲಾತ್ಮಕವಾದ ಕೆತ್ತನೆಯ ನಡುವೆ ಚಾಲಂದ್ರಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಅರೆಮಂಟಪದ ಚೌಕಟ್ಟುಗಳು ಕುಸೂರಿಶಿಲ್ಪಗಳಿಂದ ಚಿತ್ತಾಕರ್ಷಕವಾಗಿವೆ.
ದೇವಾಲಯದ ಮಹಾಮಂಟಪದ ಉತ್ತರದಿಕ್ಕಿನಲ್ಲಿ  ಉಗ್ರನರಸಿಂಹಸ್ವಾಮಿಯ ಗುಡಿ ಇದೆ. ಇಲ್ಲಿ ಸುಮಾರು ಮನುಷ್ಯನ ಎತ್ತರದ ಉಗ್ರನರಸಿಂಹನ ಶಿಲ್ಪವಿದೆ. ಗದಾಚಕ್ರಧಾರಿಯಾದ ನರಸಿಂಹ ಉಗ್ರನಾಗಿ ಬಾಯಿತೆರೆದು, ತನ್ನ ತೊಡೆಯ ಮೇಲೆ ಹಿರಣ್ಯಕಶಿಪುವನ್ನು ಮಲಗಿಸಿಕೊಂಡು ಉಳಿದೆರೆಡು ಕೈಗಳಿಂದ ರಕ್ಕಸನ ಎದೆಬಗೆದು, ಕರುಳು ಹೊರಗೆಳೆಯುತ್ತಿರುವ ಸೂಕ್ಷ್ಮ ಕೆತ್ತನೆಯ ಕೃಷ್ಣಶಿಲೆಯ ಮೂರ್ತಿ ಮನಮೋಹಕವಾಗಿದೆ. ಹಿಂಬದಿಯಲ್ಲಿರುವ ಪ್ರಭಾವಳಿಯಲ್ಲಿ ಸುಂದರ ಕೆತ್ತನೆಗಳಿವೆ. ಪಾದದ ಬಳಿ ಪ್ರಹ್ಲಾದ ಸಹಿತ ನಾಲ್ಕು ಪುಟ್ಟ ವಿಗ್ರಹಗಳಿವೆ.
ದೇವಾಲಯದ ಪ್ರಾಕರದಲ್ಲಿರುವ ಮತ್ತೊಂದು ಮಂದಿರ ಸೂರ್ಯಭಗವಾನನದು. ಈ ಗುಡಿಯಲ್ಲಿ 5 ಅಡಿ ಎತ್ತರದ ಸೂರ್ಯನಾರಾಯಣನ ವಿಗ್ರಹವಿದೆ.

ಹೋಗುವುದು ಹೇಗೆ- ಹರಪನಹಳ್ಳಿಯಿಂದ ಹೊಸಪೇಟೆಗೆ ಹೋಗುವ ಮಾರ್ಗದಲ್ಲಿ 6 ಕಿಲೋ ಮೀಟರ್ ದೂರ ಕ್ರಮಿಸಿದ ಬಳಿಕ ಸಿಂಗಾರ ಕ್ರಾಸ್ ಸಿಗುತ್ತದೆ. ಅಲ್ಲಿಂದ ಬಾಗಳಿಗೆ ಕೇವಲ 2 ಕಿಲೋ ಮೀಟರ್.  

ಶನಿವಾರ, ಡಿಸೆಂಬರ್ 10, 2016

ನುಡಿಮುತ್ತು - 41


* ಮನುಷ್ಯನು ಕಲಿಯಲು ಬಯಸುವುದಾದರೆ ಅವನ ಪ್ರತಿಯೊಂದು ತಪ್ಪು ಅವನಿಗೆ ಶಿಕ್ಷಣ ಕೊಡುತ್ತದೆ -ಚಾರ್ಲ್ಸ್ ಡೆಕ್ಕನ್.

* ಅಭಿರುಚಿಯನ್ನು ಹುಟ್ಟಿಸುವುದು ಶಿಕ್ಷಣದ ಉದ್ದೇಶವೇ ಹೊರತು, ಒಬ್ಬರು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳುವುದಲ್ಲ ಗಯಟೆ. 
 

* ಶಾಲಾ-ಕಾಲೇಜುಗಳಲ್ಲಿ ಕಲಿತದ್ದು ನಿಜವಾದ ಶಿಕ್ಷಣವಲ್ಲಅದು ಶಿಕ್ಷಣಕ್ಕೆ ಸಾಧನವಷ್ಟೆ - ಎಮರ್ಸನ್. 

 
* ಮನುಷ್ಯರಲ್ಲಿ ಪ್ರೇಮವನ್ನು ಮೂಡಿಸುವ ಸರಳ ಜೀವನನ್ನು ಕಲಿಸುವ ವಿದ್ಯೆಯೇ ಶ್ರೇಷ್ಠವಾದದ್ದು -ಟಾಲ್ಸ್ಟಾಯ್.

*
ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿಜಾನ್ ರಸ್ಕಿನ್. 
 
* ಪ್ರತಿಯೊಬ್ಬ ವ್ಯಕ್ತಿಯು ಎರಡು ರೀತಿಯ ಶಿಕ್ಷಣ ಹೊಂದುತ್ತಾನೆಒಂದು ಇತರರು ಅವನಿಗೆ ನೀಡುವುದುಇನ್ನೊಂದು ಸ್ವಂತ ಅವನು ಕಲಿಯುವುದು - ನುಡಿಮುತ್ತು.

*
ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ - ಪ್ರೇಮಚಂದ. 
 
* ಮನೆಯೇ ಮೊದಲ ಪಾಠಶಾಲೆ - ಗಾದೆ.

*
ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಮನುಷ್ಯನನ್ನು ನಡೆಸುವುದೋ ಅದೇ ಅವನ ಭವಿಷ್ಯವನ್ನು ನಿರ್ಧರಿಸುವುದು - ಪ್ಲೇಟೋ.

* ಶಿಕ್ಷಣವು ಅನುಭವಗಳ ಪೂರ್ವ ವ್ಯವಸ್ಥೆ ವಿಧಾನ - ಜಾನ್ ಡ್ಯೂಯಿ.