fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ನವೆಂಬರ್ 22, 2015

ಅಮ್ಮನ ಕೈತುತ್ತು

ಗಮ್ಮತ್ತಮ್ಮ ಗಮ್ಮತ್ತು ಗಮಗಮಗಮಿಸುವ ಗಮ್ಮತ್ತು//
ಅಮ್ಮನ ಪ್ರೀತಿಯ ಕೈತುತ್ತು ತಿಂದರೆ ಬರುವ ತಾಖತ್ತು ನಿತ್ಯವು ಮಾಡುವ ಕಸರತ್ತು ತಪ್ಪದೆ ಬರುವುದು ಮೈಕಟ್ಟು//

ಅಮ್ಮನ ಪ್ರೀತಿಯ ಕಿಮ್ಮತ್ತು ಮರಣದ ನಂತರ ಗೊತ್ತಾಯ್ತು ಗೀತೆಯ ಮಾತು ಗೊತ್ತಿತ್ತು ಆದರೂ ದುಃಖವು ಒಡೆದಿತ್ತು//

ಪ್ರಣತಿಯ ನಿರ್ಮಲ ಸಿಹಿಮುತ್ತು ಅಮ್ಮನ ನೆನಪನು ತರುತಿತ್ತು ನನ್ನ ಗೌರವದ ಒಳಗುಟ್ಟು ಅಮ್ಮನು ಕೊಟ್ಟ ಸಂಪತ್ತು//

ಭವಭಾರದ ಸಾಲಕೆ ತಲೆಕೊಟ್ಟು ಮುರಿಯಿತು ಅಮ್ಮನ ನಡುಕಟ್ಟು ಬಾರವು ಬೆಳೆಯಿತು ದುಪ್ಪಟ್ಟು ಸಾಲವೆ ಅಮ್ಮನ ಕೊಂದಿತ್ತು//

ಹೇಳುವೆ ಕೇಳಿ ಗುಟ್ಟು ಸಾಲವೆ ದುಃಖದ ತಲೆಕಟ್ಟು ಯಾರಿಗು ಬೇಡ ಕುತ್ತು ಅಮ್ಮನು ಇಲ್ಲದ ಆಪತ್ತು//

ಆಪತ್ತಮ್ಮ ಆಪತ್ತು ಸಾಲವು ನಮಗೆ ಆಪತ್ತು//

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.