fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ನವೆಂಬರ್ 28, 2015

ಸಂತಸ

ಮನುಷ್ಯನಿಗೆ ಅತಿ ಹೆಚ್ಚು ಖುಷಿಯಾದಲ್ಲಿ ಅವನು ಪಕ್ಷಿಗಳ ಜೊತೆ,  
ಪ್ರಾಣಿಗಳ ಜೊತೆ
 ಬೆಟ್ಟ ಗುಡ್ಡಗಳ ಜೊತೆಯೂ  
ತನ್ನ ಸಂತಸವನ್ನು ಹಂಚಿಕೊಳ್ಳಲು ತವಕಿಸುತ್ತಾನೆ.

ಗುರುವಾರ, ನವೆಂಬರ್ 26, 2015

ಅಲ್ಲಮಪ್ರಭುದೇವರು

ಮಂಗಳವಾರ, ನವೆಂಬರ್ 24, 2015

ವಯಸ್ಸು

  • ಕೆಲವು ಹೆಂಗಸರಿಗೆ ಆಗುತ್ತದೆಂದು ಹೇಳಲುಬಾರದು
  • ನಿಮ್ಮೆದುರಿಗಿನವರು ಮಾತೇ ನಿಲ್ಲಿಸುತ್ತಿಲ್ಲವೆನಿಸಿದರೆ ನಿಮ್ಮ ವಯಸ್ಸೆಷ್ಟು
  • ಯಶಸ್ಸಿಗೆ ಇದೂ ಒಂದು ಕಾರಣ
  • ಚಿಕ್ಕ ವಯಸ್ಸಿನಲ್ಲೆ ಮದುವೆಯಾದವನಿಗೆ ಬೇಗ ವಯಸ್ಸಾಗುತ್ತದೆ
  • ಬಯೋಡೇಟಾದಲ್ಲಿ ಮಾತ್ರ ಇದನ್ನು ಸರಿಯಾಗೇ ತುಂಬಬೇಕಾಗುತ್ತದೆ
  • ನಮ್ಮದಾದರೆ ಹತ್ತು ಕಡಿಗೆ, ಪರರದ್ದು ಹತ್ತು ಹೆಚ್ಚು ಹೇಳಿದರೂ ಕಡಿಮೆಯೇ
  • ವಯಸ್ಸಿಗೆ ಮಿತಿಯಿಲ್ಲ, ಆಯುಸ್ಸಿಗಿದೆ
  • ಊರ್ಧ್ವಮುಖಿ
  • ಹಲ್ಲು ಸೆಟ್ಟು ಕನ್ನಡಕ, ವಿಗ್ ಮೊದಲಾದವಕ್ಕೆಲ್ಲ ಖರ್ಚು ಮಾಡಲು ಕಾರಣವಾದದ್ದು
  • ವಯಸ್ಸಾದವರಂತೆ ಕಾಣಿಸುತ್ತಿಲ್ಲವೆಂದರೆ ವಯಸ್ಸನ್ನು ಯಾರೂ ದ್ವೇಷಿಸುವುದಿಲ್ಲ
  • ನಟಿಮಣಿಗಳ ಮೇಲೆ ವಯಸ್ಸಿಗೇಕೋ ಅನುಕಂಪ, ತುಂಬಾ ನಿಧಾನ
  • ಕೆಲವರು ಹುಟ್ಟಿದ ದಿನವನ್ನಷ್ಟೇ ಹೇಳಲು ಬಯಸುತ್ತಾರೆ, ಇಸ್ವಿಯನ್ನಲ್ಲ
  • ವಯಸ್ಸೇ ಎಲ್ಲವನ್ನೂ ಮಾಡಿಸುತ್ತೆ ತಾರುಣ್ಯದಲ್ಲಿ, ವೃದ್ಧಾಪ್ಯದಲ್ಲಿ ಅದೇ ವಯಸ್ಸೇ ಏನನ್ನೂ ಮಾಡಲು ಬಿಡುವುದಿಲ್ಲ.
  • ವಯಸ್ಸು ಆಗುವುದನ್ನು ತಡೆಯಬೇಕೆಂದರೆ ಅದಕ್ಕೆ ಸಾವೊಂದೇ ಮಾರ್ಗ
  • ವಯಸ್ಸಿಗಿಂತ ಮನಸ್ಸು ಮುಖ್ಯವೆಂಬುದು ವಯಸ್ಸಾದ ಮೇಲೆ ತಿಳಿಯುತ್ತದೆ.
  • ಚಿಕ್ಕ ವಯಸ್ಸಿನಲ್ಲಿ ಮಾಡಲಾಗದ್ದನ್ನೆಲ್ಲ ದೊಡ್ಡವರಾದ ಮೇಲೆ ಮಾಡಬಹುದು, ಆದರೆ ಇದರ ಉಲ್ಟಾ ಅಸಾಧ್ಯ
  • ವಯಸ್ಸಿನ ನಿರ್ಬಂಧವಿಲ್ಲದ್ದು ಸಾವಿಗೆ ಮಾತ್ರ
  • ಆಯುಸ್ಸಿನ ಲೆಕ್ಕಾಚಾರ
-ವಿಶ್ವನಾಥ ಸುಂಕಸಾಳ

ಭಾನುವಾರ, ನವೆಂಬರ್ 22, 2015

ಅಮ್ಮನ ಕೈತುತ್ತು

ಗಮ್ಮತ್ತಮ್ಮ ಗಮ್ಮತ್ತು ಗಮಗಮಗಮಿಸುವ ಗಮ್ಮತ್ತು//
ಅಮ್ಮನ ಪ್ರೀತಿಯ ಕೈತುತ್ತು ತಿಂದರೆ ಬರುವ ತಾಖತ್ತು ನಿತ್ಯವು ಮಾಡುವ ಕಸರತ್ತು ತಪ್ಪದೆ ಬರುವುದು ಮೈಕಟ್ಟು//

ಅಮ್ಮನ ಪ್ರೀತಿಯ ಕಿಮ್ಮತ್ತು ಮರಣದ ನಂತರ ಗೊತ್ತಾಯ್ತು ಗೀತೆಯ ಮಾತು ಗೊತ್ತಿತ್ತು ಆದರೂ ದುಃಖವು ಒಡೆದಿತ್ತು//

ಪ್ರಣತಿಯ ನಿರ್ಮಲ ಸಿಹಿಮುತ್ತು ಅಮ್ಮನ ನೆನಪನು ತರುತಿತ್ತು ನನ್ನ ಗೌರವದ ಒಳಗುಟ್ಟು ಅಮ್ಮನು ಕೊಟ್ಟ ಸಂಪತ್ತು//

ಭವಭಾರದ ಸಾಲಕೆ ತಲೆಕೊಟ್ಟು ಮುರಿಯಿತು ಅಮ್ಮನ ನಡುಕಟ್ಟು ಬಾರವು ಬೆಳೆಯಿತು ದುಪ್ಪಟ್ಟು ಸಾಲವೆ ಅಮ್ಮನ ಕೊಂದಿತ್ತು//

ಹೇಳುವೆ ಕೇಳಿ ಗುಟ್ಟು ಸಾಲವೆ ದುಃಖದ ತಲೆಕಟ್ಟು ಯಾರಿಗು ಬೇಡ ಕುತ್ತು ಅಮ್ಮನು ಇಲ್ಲದ ಆಪತ್ತು//

ಆಪತ್ತಮ್ಮ ಆಪತ್ತು ಸಾಲವು ನಮಗೆ ಆಪತ್ತು//

ಶುಕ್ರವಾರ, ನವೆಂಬರ್ 20, 2015

ಬಣ್ಣದ ತಗಡಿನ ತುತ್ತೂರಿ

  • ೩೧--೨೦೧೨
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ ||||
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು||||
ತನಗೇ ತುತ್ತುರಿ ಇದೆಯೆಂದ,
ಬೇರಾರಿಗು ಅದು ಇಲ್ಲೆಂದ, ||||
ಕಸ್ತುರಿ ನಡೆದನು ಬೀದಿಯಲಿ,
ಜಂಬದ ಕೋಳಿಯ ರೀತಿಯಲಿ,||||
ತುತ್ತುರಿಯೂದುತ ಕೊಳದ ಬಳಿ,
ನಡೆದನು ಕಸ್ತುರಿ ಸಂಜೆಯಲಿ. ||||
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ||||
ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು ||||
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತುರಿ ಬೋಳಾಯ್ತು ||||
ಬಣ್ಣದ ತುತ್ತುರಿ ಹಾಳಾಯ್ತು
ಜಂಬದ ಕೋಳಿಗೆ ಗೋಳಾಯ್ತು|||| ಜಿ.ಪಿ ರಾಜರತ್ನಂ.