fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಜನವರಿ 26, 2015

ಜನೇವರಿ 26

ಕಳ್ ಮಂಜನಿಗೆ ಸಾಸಕರಿಂದ ಫೋನ್ ಬಂತು. ನೋಡಲಾ ಮಂಜ, ಈ ಕಿತ ಗಣರಾಜ್ಯೋತ್ಸವ ಅದ್ದೂರಿಯಾಗೆ ಮಾಡಬೇಕು. ಟಿವಿನಾಗೆ ನಮ್ಮ ತಾಲ್ಲೂಕ್ ಸುದ್ದಿ ಬರಬೇಕು. ಈ ಕಿತ MP election ಗೆ ನಿಂತ್ಕಂತಿನಿ. ಲಕ್ಸ ಖರ್ಚಾದರೂ ಪರವಾಗಿಲ್ಲ ಕನ್ಲಾ ಯಲ್ಲಾ ಸಂದಾಕಿ arrangement ಮಾಡಲಾ, ಭಾನುವಾರ ಬ್ಯಾರೆ ಜನ ಜಮಾಯಿಸಬೇಕು ಅಂದರು. ಆಯ್ತಣ್ಣೊ ಅಂತೇಳಿ ಯಲ್ಲರನ್ನು ಕರೆದು ಹೇಳಿದ.

ನೋಡ್ರಲಾ ಈ ಕಿತ ಪೆಸೆಲ್ ಇರಬೇಕು ಅಂತ ಸಾಸಕರು ಹೇಳವರೆ....ಹಂಗೆ ಮಾಡಮಾ ಕನ್ರಲಾ ಅಂದ. ಯಲ್ಲರಿಗೂ ಒಂದೊಂದು ಕೆಲಸ ವಹಿಸಿದ. ಇಸ್ಕೂಲ್ ಮುಂದೆ ಮೈದಾನದಾಗೆ ಯಲ್ಲ arrangement ಮಾಡಿದ. ಸಿದ್ಲಿಂಗುಗೆ ಫೋನ್ ಮಾಡಿ ಬೆಂಗಳೂರಿನಿಂದ ಜನರನ್ನ ಕರೆಸ್ತೀನಿ ಅಂದ.
ಸಾಸಕರಿಂದ ಕಾಸ್ ಇಸ್ಕಂಡು ಪ್ರಚಾರ ಯಲ್ಲ ಮಾಡಿಸಿದ. ಬೆಂಗಳೂರಿಗೂ ಸಹ ಹೋಗಿ ಬಂದ.

ಭಾನುವಾರ ಬಂದೆ ಬುಡ್ತು. ಜನ ಸಿಕ್ಕ ಪಟ್ಟೆ ಜಮಾಯಿಸಿದರು. ಸಾಸಕರ ಕಾರ್ ಬಂತು. ಯಲ್ಲ arrangement ನೋಡಿ ದಂಗಾದರು. ನೀವು MP ಆಯ್ತೀನಿ ಅಂದ್ರಲಾ ಸಾ ಅದಕ್ಕೆ Delhi ತರ ಪೆರೇಡ್ ಅರೆಂಜ್ ಮಾಡಿವ್ನಿ ಅಂದ ಕಳ್ ಮಂಜ. ಮೈದಾನ ದಾಗೆ uniform ಹಾಕೊಂಡು Left Right ಅಂತ ಅಂಕಂಡು ಜನ ನಿಂತಿದರು. ಐದಾರು ತರಹದ ತಂಡಗಳು. ಒಂದೊಂದು ತಂಡದಲ್ಲಿ ಸುಮಾರು ಇಪ್ಪತ್ತು ಜನ ಇದ್ದರು.

ಕ್ಯಾಂಟರ್ ಗಾಡಿನ ಯಲ್ಲ ಕವರ್ ಮಾಡಿ ಸ್ತಬ್ಧದೃಶ್ಯ (tableau) ಮಾಡಿಸಿದ್ದ. ಇಮಾಮ್ ಸಾಬಿದು ಮಟನ್ ಸಾಗಿಸೊ ಲಗ್ಗೇಜ್ ಅಟೋ ಸಹ ಸ್ತಬ್ಧದೃಶ್ಯಕ್ಕೆ ಬಳಸಿದ್ದ. ಮೈಕ್ ಸೆಟ್ ನಲ್ಲಿ ಬರೀ ಕನ್ನಡ ಹಾಡು ಹಾಕಿಸಿದ್ದ. ಪೆರೇಡ್ ಸುರು ಆಯ್ತು. ಕ್ಯಾಂಟರ್ ಗಾಡಿಗಳು ಮುಂದೆ... ಅದರ ಹಿಂದೆ left right ಅಂತ military ಗಳ ತರನೆ ತಂಡಗಳು ಹೋದವು. ಕೈನಲ್ಲಿ plastic gun ಬ್ಯಾರೆ ಇದ್ದವು. ಸಾಸಕರು ಗೌರವ ವಂದನೆ ಸ್ವೀಕರಿಸಿದರು. ಮುಗಿತೇನಲಾ ಕೈ ನೊಯ್ತದೆ salute ಮಾಡಿ ಅಂತಿದ್ದರು. ಮೈಕಲ್ಲಿ ಮಾತ್ರ ನಾವಾಡುವ ನುಡಿಯೆ ಕನ್ನಡ ನುಡಿ ಹಾಡು ಬತ್ತ ಇತ್ತು....ಇಮಾಮ್ ಸಾಬಿ ಲಗ್ಗೇಜ್ ಅಟೋ ಅರ್ಧದಲ್ಲಿ ಮದ್ಯ ಕೆಟ್ಟು ಹೊಯ್ತು...ಅಮ್ಯಾಕೆ ತಳ್ಳಿ ಸೈಡಿಗೆ ನಿಲ್ಲಿಸಿದರು. ಸಾಸಕರು ಬಾವುಟ ಹಾರಿಸಿದರು. ಕಳ್ ಮಂಜ ಒಂದು ಗನ್ ತಕ್ಕಂಡು ಆಕಾಶಕ್ಕೆ ಮೂರು ಗುಂಡು ಹಾರಿಸಿದ. ಒಂದು bullet just miss ಆಗಿ ತೆಂಗಿನಮರಕ್ಕೆ ಬಿತ್ತು.

ಯಲ್ಲ ಆದಮ್ಯಾಕೆ ಸಾಸಕರು ಕಳ್ ಮಂಜನಿಗೆ ಕಾಸ್ ಕೊಟ್ಟು ಹೊಳಟರು. ಮಂಜ ಯಲ್ಲರಿಗೂ ಕಾಸ್ ಹಂಚಿ ಕಳಿಸಿದ. ಸಿವಮ್ಮನ ಹೋಟೆಲ್ ತವ ಯಲ್ಲ ಜನ ಕೇಳಿರು. military ನಾ ಎಲ್ಲಿಂದ ಕರೆಸಿದ್ಯಲಾ ಅಂತ...ಆಗ ಬಾಯಿ ಬುಟ್ಟ...ಲೇ ಬಡ್ಡೆತವ...ಅವರು military ಅಲ್ಲ ಕನ್ಲಾ...ಬೆಂಗಳೂರಲ್ಲಿ security ಕೆಲಸ ಮಾಡೋರು ಕನ್ಲಾ....ಸಿದ್ಲಿಂಗು ಆಫೀಸ್ ತವ ಸುತ್ತ ಮುತ್ತ ಯಲ್ಲ security gaurd ಗಳಿಗೆಲ್ಲಾ ರಜೆ ಇತ್ತಲ್ಲ ಅದಕ್ಕೆ ಅವರನ್ನೆಲ್ಲಾ ಕರೆಸಿದ್ದೆ uniform ಹಾಕಂಡ್ plastic gun ತಕ್ಕಂಡ್ ಬನ್ನಿ ಅಂತ. ಮತ್ತೆ ನೀನು ಗುಂಡು ಹಾರಿಸಿದ್ದು ಅಂದರು....ಅದಾ ಪೊಲೀಸ್ ಟೇಸನ್ ತವ ಬಾಗಿಲಲ್ಲಿ gunman ದು ಕನ್ಲಾ.....ನೆನ್ನೆ ರಾತ್ರಿ night duty ಮಾಡೋನು ತೂಕಡಿಸುವಾಗ ಹೊಡಕೊಂಡು ಬಂದೆ ಅಂದ.

ವಿಶೇಷ ಸುದ್ದಿ ಅಂತ TV9 ನವರು ತೋರಿಸುತ್ತ ಇದ್ದರು. ಕಳ್ ಮಂಜನಿಗೆ ಸಾಸಕರ ಫೋನ್ ಬಂತು....ಲೇ ಬಡ್ಡೆತ್ತದೆ ಬಾವುಟ ಯಾವುದಲಾ ಕಟ್ಟಿದೆ....ನಮ್ಮ ದೇಸದ್ದು ಅಲ್ವೇನಲಾ ಕಟ್ಟೋದು ಅಂದರು....ಅಣ್ಣೊ ಅದು ನಮ್ಮ ದೇಶದ್ದೆ ಅಂದ ಮಂಜ.....ಲೇ ಅದು ಹಷಣ ಕೆಂಪು ಕನ್ನಡ ಬಾವುಟ ಕಟ್ಟಿದಲ್ಲೊ...TV9 ಅದೆ ತೋರಿಸಿ ರುಬ್ಬುತ ಅವರೆ ಅಂದರು ಸಾಸಕರು...

ಅಣ್ಣೊ ನೀವೆ ಹೇಳಿರಿ ಗಣ "ರಾಜ್ಯೋತ್ಸವ" ಆಚಾರಣೆ ಮಾಡಮ ಅಂತ ಅದುಕ್ಕೆ ನಾನು ಆ ಬಾವುಟ ಕಟ್ಟಿಸಿದ್ದೆ ಅಂದ.
ಥೂ ನಿನ್ನ ಮಕ್ಕೆ ಕಾದ ಯಣ್ಣೆ ಉಯ್ಯ....
Posted by ಸವಿಗನಸು

ಗುರುವಾರ, ಜನವರಿ 22, 2015

ನನ್ನಮ್ಮ



ನನ್ನಮ್ಮನಮ್ಮ ನೀ ನನ್ನಮ್ಮನಮ್ಮ

ನೀನಂದ್ರೆ ನಂಗೆ, ಬಲು ಹೆಮ್ಮೆಯಮ್ಮ



ಆಗಿದ್ರು ಸುಸ್ತು

ಕೇಳಿದ್ದಕೊಟ್ಟು

ಹೇಳ್ತೀ ನಿ ಅಸ್ಟೂಕು ಅಯ್ತಾಯ್ತು ಅಸ್ತು||ನನ್ನಮ್ಮ||



ಇದ್ದರೂ ಇಸ್ಟೇ

ಮಾಡದೆ ಸಿಟ್ಟು

ತಿನ್ಸ್ತಿನಿ ಹೊಟ್ಟೆ ಗೆರಡೋತ್ತು ತುತ್ತು||ನನ್ನಮ್ಮ||



ಇದ್ದಾಸೆ ಅಸ್ಟು

ಮರೆಮಾಚಿ ವಸ್ಟು

ನಗ್ತಿ ನೀ ನಂಗೆ ಕಚ್ಗುಳಿ ಯಿಟ್ಟು||ನನ್ನಮ್ಮ||



ಕಸ್ಟಾವ ಕಟ್ಟಿ

ರೊಟ್ಟಿಯ ತಟ್ಟಿ

ಕೊಡ್ತಿ ನೀ ಬೆನ್ತಟ್ಟಿ ಕೈಯಾಗ ತಟ್ಟಿ||ನನ್ನಮ್ಮ||



ನಿಂಗ್ಸೇರುತಿದ್ರು

ತಂಗುಳ್ನ ತಿಂದ್ರು

ಬಡ್ಸತಿ ನಿ ನಂಗ್ಮಾಡಿ ಬಿಸಿ ಬಿಸಿದೆನ್ರು||ನನ್ನಮ್ಮ||

ಮನ್ಯಾಗಿನ್ ಸಾಮಾನು

ಎಲ್ಲೊ ಒಗೆದಿದ್ರು

ಹುಡ್ಕ್ಯಾಡ್ಕೊಂಡ್ ತರ್ತಿ ನೀ ನಾ ಕೇಳದಿದ್ರು||ನನ್ನಮ್ಮ||
                                                                                                                        ಕೃಪೆ : Prashant Bhate

ಬುಧವಾರ, ಜನವರಿ 21, 2015

ವಿಜಯಪುರದ ಪುರಿ


ಪ್ರಮಾಣ: ಮೂವರಿಗಾಗುವಷ್ಟು ತಯಾರಿಕಾ 
ಅವಧಿ: ಹದಿನೈದು ನಿಮಿಷಗಳು 
ತಯಾರಿಗೊಳ್ಳಲು ಬೇಕಾಗುವ ಸಮಯ: ಇಪ್ಪತ್ತು ನಿಮಿಷಗಳು 
ಬೇಕಾಗುವ ಸಾಮಗ್ರಿಗಳು 
*ಸ೦ಸ್ಕರಿತ ಹಿಟ್ಟು (ಮೈದಾ) 
*ಮೊಸರು - ಎರಡೂವರೆ ಕಪ್ ಗಳಷ್ಟು *ಅಡುಗೆ ಪುಡಿ (ಬೇಕಿಂಗ್ ಪೌಡರ್)- ಅರ್ಧ ಕಪ್ *ಸೋಡಾ ಬೈಕಾರ್ಬೊನೇಟ್ - ಅರ್ಧ ಟೀಚಮಚದಷ್ಟು 
*ಉಪ್ಪು - ಒ೦ದು ಚಿಟಿಕೆಯಷ್ಟು 
*ಸಕ್ಕರೆ - ಒ೦ದು ಟೀಚಮಚದಷ್ಟು 
*ಎಣ್ಣೆ - ಎರಡು ಟೀಚಮಚಗಳಷ್ಟು 
ತಯಾರಿಸುವ ವಿಧಾನ 
*ಮೈದಾ ಹಿಟ್ಟು, ಅಡುಗೆ ಪುಡಿ, ಸೋಡಾ ಬೈಕಾರ್ಬೊನೇಟ್, ಹಾಗೂ ಉಪ್ಪನ್ನು ಒ೦ದು ಬಟ್ಟಲಿಗೆ ಹಾಕಿರಿ. ಈ ಎಲ್ಲಾ ವಸ್ತುಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿ ಹಾಗೂ ಇದಾದ ಬಳಿಕ ಮಿಶ್ರಣವನ್ನು ಜರಡಿಯ ಮೂಲಕ ಹಾಯಿಸಿರಿ. ಮೊಸರನ್ನು ಉಪ್ಪು ಹಾಗೂ ಸಕ್ಕರೆಯೊ೦ದಿಗೆ ಪ್ರತ್ಯೇಕವಾಗಿ ಬೆರೆಸಿರಿ. ಈ ಮಿಶ್ರಣವನ್ನು ಮೊದಲೇ ಸಿದ್ಧಪಡಿಸಿಟ್ಟುಕೊ೦ಡಿರುವ ಹಿಟ್ಟಿನ ಮಿಶ್ರಣದೊ೦ದಿಗೆ ಬೆರೆಸಿರಿ. 
*ಅನ೦ತರ ಈ ಮಿಶ್ರಣಕ್ಕೆ ಒ೦ದು ಕಪ್ ನಷ್ಟು ನೀರನ್ನು ಬೆರೆಸಿ ಎಲ್ಲಾ ಘಟಕಗಳನ್ನೂ ನಿಧಾನವಾಗಿ ಕಲಕಿ, ಮಿಶ್ರಗೊಳಿಸಿ, ಹದವಾಗಿ ನಾದುವುದರ ಮೂಲಕ ಒ೦ದು ನಯವಾದ ಹಿಟ್ಟಿನ ಉ೦ಡೆಯನ್ನು ಸಿದ್ಧಗೊಳಿಸಿರಿ. ಈ ಹಿಟ್ಟಿನ ಉ೦ಡೆಗೆ ಎರಡು ಚಮಚಗಳಷ್ಟು ಎಣ್ಣೆಯನ್ನು ಹಾಕಿ ಅದನ್ನು ಒದ್ದೆ ಬಟ್ಟೆಯಿ೦ದ ಮುಚ್ಚಿರಿ. 
*ಒ೦ದು ಗ೦ಟೆಯ ಕಾಲ ಅದನ್ನು ಹಾಗೆಯೇ ಇಟ್ಟಿರಿ. ಅನ೦ತರ ಈ ಹಿಟ್ಟಿನ ಉ೦ಡೆಯನ್ನು ಹದಿನಾರು ಸಮಪ್ರಮಾಣಗಳಲ್ಲಿ ವಿಭಾಗಿಸಿರಿ. ಪ್ರತಿಯೊ೦ದು ಹಿಟ್ಟಿನ ತುಣುಕನ್ನೂ ಕೂಡ ಉ೦ಡೆಯನ್ನಾಗಿ ಪರಿವರ್ತಿಸಿರಿ. ಹತ್ತು ನಿಮಿಷಗಳ ಕಾಲ ಇವುಗಳನ್ನು ಹಾಗೆಯೇ ಮುಚ್ಚಿಡಿ. 
*ಈಗ ನಿಮ್ಮ ಅ೦ಗೈಗಳಿಗೆ ಸ್ವಲ್ಪ ತೈಲವನ್ನು ಉಜ್ಜಿಕೊಳ್ಳುವುದರ ಮೂಲಕ ಅ೦ಗೈಗಳನ್ನು ಜಿಡ್ಡಾಗಿಸಿಕೊ೦ಡು, ಈ ಉ೦ಡೆಗಳನ್ನು ಚಪ್ಪಟೆಯಾಗಿಸಿರಿ. ಸುಮಾರು ಐದು ಇ೦ಚುಗಳಷ್ಟು ವ್ಯಾಸಗಳುಳ್ಳ ತಟ್ಟೆಯಾಕಾರಕ್ಕೆ ಇವುಗಳನ್ನು ಚಪ್ಪಟೆಯಾಗಿಸಿರಿ. 
*ಕಡಾಯಿಯೊ೦ದರಲ್ಲಿ ಸಾಕಷ್ಟು ಎಣ್ಣೆಯನ್ನು ಬಿಸಿಮಾಡಿಕೊ೦ಡು, ಈ ಭಟುರಾಗಳನ್ನು ತೀಕ್ಷ್ಣವಾದ ಉರಿಯಲ್ಲಿ, ಬಟುರಾಗಳ ಎರಡೂ ಬದಿಗಳೂ ಕೂಡ ತಿಳಿಕ೦ದು ಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಗಾಢವಾಗಿ ಕರಿಯಿರಿ. 
ಪೋಷಕಾ೦ಶ ಸಲಹೆ: 
ಈ ಬ್ರೆಡ್ ಬಟುರಾ ರೆಸಿಪಿ ಎಳ್ಳಷ್ಟೂ ಆರೋಗ್ಯದಾಯಕವಲ್ಲ. ಬ್ರೆಡ್ ಬಟುರಾ ರೆಸಿಪಿಯು ಅತ್ಯಧಿಕ ಪ್ರಮಾಣದಲ್ಲಿ ತೈಲಾ೦ಶವುಳ್ಳದ್ದಾಗಿದ್ದು, ತೂಕನಷ್ಟವನ್ನು ಹೊ೦ದಲು ಪೂರಕವಾಗುವ ಕಾರ್ಯ ಸೂಚಿಯನ್ನನುಸರಿಸುತ್ತಿರುವವರು ಈ ಖಾದ್ಯವನ್ನು ಯಾವುದೇ ಕಾರಣಕ್ಕೂ ಕೂಡ ಸೇವಿಸತಕ್ಕದ್ದಲ್ಲ. 
ತಯಾರಿಕೆಗೆ ಸ೦ಬ೦ಧಿಸಿದ೦ತೆ ಒ೦ದು ಸಲಹೆ 
ಈ ರುಚಿರುಚಿಯಾದ ಬ್ರೆಡ್ ಬಟುರಾ ರೆಸಿಪಿಯನ್ನು ತಯಾರಿಸುವಾಗ, ಎಣ್ಣೆಯ ಬದಲು ತುಪ್ಪವನ್ನು ಬಳಸುವುದು ಅತ್ಯುತ್ತಮ.

ಮಂಗಳವಾರ, ಜನವರಿ 20, 2015

20,000

ಈ ಬುಧವಾರದ 20 ಜನೇವರಿ 2015
ಸೂರ್ಯ ಕಿರಣದೊಂದಿಗೆ,
ಗಂಟೆಯ ನಾಧದ ಜೊತೆಗೆ ಈ ತಾಣವನ್ನು ವಿಕ್ಷೀಸುತ್ತಿರುವ ತಮಗೆಲ್ಲರಿಗೂ
20,000 ವಿಕ್ಷೀಸುತ್ತಿರುವವರಿಗೂ ತುಂಬು ಹೃದಯದಿಂದ ಸ್ವಾಗತ.........



ಬುಧವಾರ, ಜನವರಿ 14, 2015

ಬಾದಾಮಿ ಚಾಳುಕ್ಯರ ನಾಡಿನ ಶಿಲಾ ವೈಭವ

ಕರ್ನಾಟಕ ಶಿಲ್ಪಕಲಾ ಇತಿಹಾಸ ಬೆಳೆದುಬಂದ ಬಗೆ ಅರಿಯಲು ಬಾದಾಮಿಗೆ ಬರಬೇಕು..
*ಟಿ.ಎಂ.ಸತೀಶ್ Badami Cave temple ಕನ್ನಡರತ್ನ.ಕಾಂ, kannadaratna.com,
    ಗಂಗ, ಕದಂಬ, ಹೊಯ್ಸಳ, ಚಾಲುಕ್ಯ, ವಿಜಯನಗರದರಸರು, ಮೈಸೂರು ಒಡೆಯರು, ರಾಷ್ಟ್ರಕೂಟರಾಳಿದ ಕರುನಾಡು ಕಲೆಗಳ ಬೀಡು. ಬಹುತೇಕ ಎಲ್ಲ ಅರಸು ಮನೆತನದವರೂ ತಮ್ಮ ತಮ್ಮ ರಾಜ್ಯದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಿಸಿ ತಾವು ಕಲೋಪಾಸಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರ ಫಲವಾಗಿಯೇ ಇಂದಿಗೂ ಶಿಲ್ಪಕಲಾ ಕ್ಷೇತ್ರದಲ್ಲಿ ಕರ್ನಾಟಕ ವಿಶ್ವಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದಿದೆ.
    ಕರುನಾಡ ಶಿಲ್ಪಕಲಾವೈಭವಕ್ಕೆ ಚಾಲುಕ್ಯರ ಕೊಡುಗೆ ಅಪಾರ. ಹೊಯ್ಸಳರ ಬೇಲೂರು -ಹಳೇಬೀಡಿನಂತೆಯೇ ವಾಸ್ತು ವೈಭವ, ಕಲಾಶ್ರೀಮಂತಿಕೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿ, ಸನಿಹದಲ್ಲೇ ಇರುವ ಬನಶಂಕರಿ, ಐಹೊಳೆ, ಪಟ್ಟದಕಲ್ಲುಗಳ ದೇವಾಲಯದಲ್ಲಿಯೂ ಕಾಣಬಹುದು.
ಬಾದಾಮಿ
      ಬಾದಾಮಿ ಇತಿಹಾಸ ಪ್ರಸಿದ್ಧವಾದ ಪ್ರಾಚೀನ ಸ್ಥಳ. ಇದಕ್ಕೆ ವಾತಾಪಿ ಎಂಬ ಹೆಸರಿತ್ತು. 6ನೇ ಶತಮಾನದಿಂದ 8ನೇ ಶತಮಾನದ ಅವಧಿಯಲ್ಲಿ ಕರುನಾಡನ್ನಾಳಿದ ಹೆಮ್ಮೆಯ ಕಲ್ಯಾಣದ ಚಾಲುಕ್ಯರು ಈ ಊರನ್ನು ಅಭಿವೃದ್ಧಿಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಅರಸರು ಇಲ್ಲಿ ಹೆಬ್ಬಂಡೆಗಳನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿ ಇರುವ ಚಿತ್ರಕಲೆಗಳು ಬಾದಾಮಿ ಚಾಲುಕ್ಯರ ಕಲಾರಾಧನೆ ಹಾಗೂ ಸೌಂದರ್ಯ ಪ್ರeಗೆ ಹಿಡಿದ ಕೈಗನ್ನಡಿಯಾಗಿ ಇಂದು ಪ್ರವಾಸಿ ತಾಣಗಳ ಪೈಕಿ ಪ್ರಮುಖವಾಗಿದೆ. ಎರಡು ಬೃಹತ್ ಪರ್ವತಗಳ ಕಡಿದಾದ ಕಣಿವೆ ಪ್ರದೇಶದಲ್ಲಿರುವ ಗುಹಾಂತರ್ಗತ ದೇಗುಲಗಳು ಕೆಂಪು ಶಿಲೆಗಳಿಂದ ನಿರ್ಮಿತವಾಗಿದ್ದು ನಯನ ಮನೋಹರವಾಗಿವೆ. ಆದರೆ ಈ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಮೆಟ್ಟಿಲುಗಳೇರಿ ಮೇಲೆ ಹೋಗುಬೇಕು ಅಷ್ಟೇ.
Badami Cave Temple ಕನ್ನಡರತ್ನ.ಕಾಂ, kannadaratna.com, ಇತಿಹಾಸ
    ಚಾಲುಕ್ಯರು ತಮ್ಮ ಸಾಮ್ರಾಜ್ಯವನ್ನು ಕಟ್ಟಿ, ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೊದಲೇ ಇದು ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿತ್ತು ಎಂಬುದು ಗ್ರೀಕ್ ಭೂಗೋಳಕಾರ ಟಾಲೆಮಿ ಉಲ್ಲೇಖದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ ಸರೋವರದ ಉತ್ತರ ಭಾಗದಲ್ಲಿ ಕಿ.ಪೂ. ೩ನೇ ಶತಮಾನಕ್ಕೆ ಸೇರಿದ ಮಣ್ಣಿನ ಪಾತ್ರೆಗಳು, ಕಟ್ಟಡ ಅವಶೇಷಗಳು ದೊರೆತಿವೆ.
  
         ಬಾಗಲಕೋಟೆಯಿಂದ 35 ಕಿ.ಮೀ. ದೂರದಲ್ಲಿರುವ ಬಾದಾಮಿಯ ಮಾಲಗಿತ್ತಿ ದೇವಾಲಯ, ಶಿವಾಲಯ ಹಾಗೂ ಮೇಣಬಸದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಎರಡು ಬಳಪದ ಕಲ್ಲಿನ ಬೆಟ್ಟಗಳ ನಡುವಿನ ಕಂದಕಗಳ ನಡುವೆ ಇರುವ ಬಾದಾಮಿಯಲ್ಲಿ ಶೈವ ಗುಹಾಲಯ, ವೈಷ್ಣವ ಗುಹಾಲಯ, ವಿಷ್ಣುಗುಹೆ ಹಾಗೂ ಜೈನಗುಹೆಗಳು ತುಂಬಾ ಪ್ರಸಿದ್ಧವಾಗಿವೆ. ವಿವಿಧ ನೃತ್ಯಭಂಗಿಯಲ್ಲಿರುವ ಶಿಲ್ಪಕಲಾ ಕೆತ್ತನೆಗಳು ಮನಸೆಳೆಯುತ್ತವೆ. ಮೇಣಬಸದಿಯಲ್ಲಿ ನಾಲ್ಕು ಲಯಣಗಳಿದ್ದು, ಒಂದನೆ ಲಯಣದಲ್ಲಿರುವ ಅರ್ಧನಾರೀಶ್ವರ, ಚಾವಣಿಯ ಗಂಧರ್ವ ದಂಪತಿ, ಎರಡನೇ ಲಯಣದ ಚಾವಣಿಯ ಅಲಂಕರಣ, ಮೂರನೇ ಲಯಣದ ಶೇಷಶಾಯಿ ವಿಷ್ಣು ಪ್ರಮುಖವಾದ ಶಿಲ್ಪಗಳು. ಶೇಷಶಾಯಿ ವಿಷ್ಣುವನ್ನು ಪಾರ್ಶ್ವನಾಥನ ವಿಗ್ರಹ ಎಂದೂ ಸಂಶೋಧಕರು ಹೇಳುತ್ತಾರೆ. ಕಲ್ಲನ್ನು ಕೊರೆದು ನಿರ್ಮಿಸಿದ ಬೃಹತ್ ಶಿವಲಿಂಗ... ಹೀಗೆ ಹಲವು ಮನೋಹರ ಕೆತ್ತನೆಗಳು ಈ ಗುಹಾಲಯಗಳಲ್ಲಿವೆ. ವೈಷ್ಣವ ಲಯಣದ ಮಧ್ಯೆ ನೈಸರ್ಗಿಕ ಗುಹೆಯೂ ಇದೆ. ಇಲ್ಲಿ ಬೋಸತ್ವ, ಪದ್ಮಪಾಣಿಯ ಉಬ್ಬುಶಿಲ್ಪಗಳಿವೆ. ಮೂರನೇ ಲಯಣದಲ್ಲಿ ವಿಷ್ಣು, ಭೂವರಹ, ನರಸಿಂಹ, ಹರಿಹರ, ಬ್ರಹ್ಮ, ವಿಷ್ಣು, ಶಿವ, ಸಮುದ್ರ ಮಥನ, ಕೃಷ್ಣಲೀಲೆ ಮೊದಲಾದ ಚಿತ್ರ ಪಟ್ಟಿಕೆಗಳು ಪುರಾಣದ ಕಥೆಗಳನ್ನೇ ಹೇಳುತ್ತಾ ನಿಂತಿವೆ.
             ಸಾಲು ಭಂಜಿಕೆಗಳಿಂದ ರಮಣೀಯವಾಗಿರುವ ದೇವಾಲಯಗಳ 3ನೇ ಗುಹೆಯಲ್ಲಿರುವ ವಹಾವಿಷ್ಣುವಿನ ವಿಗ್ರಹ ಅತ್ಯಂತ ಮನೋಹರವಾದ ಬೃಹತ್ ಶಿಲ್ಪವಾದರೆ, ಮೊದಲ ಗುಹೆಯಲ್ಲಿರುವ 18 ಬಾಹುಗಳ ನಟರಾಜ ಶಿಲ್ಪ ನಯನ ಮನೋಹರವಾಗಿದೆ.
Bhuthanatha Temple ಕನ್ನಡರತ್ನ.ಕಾಂ, kannadaratna.com,      ಭೂತನಾಥನ ಕೆರೆ, ನದಿತಟದಲ್ಲಿರುವ ಶಿವ, ವಿಷ್ಣು ದೇವಾಲಯ, ಭೂತನಾಥನ ದೇವಾಲಯಗಳು ರುದ್ರ ರಮಣೀಯವಾಗಿವೆ. ಬದಾಮಿಯ ಉತ್ತರ ಬೆಟ್ಟದಲ್ಲಿ ಬಾವನ್ ಬಂಡೆ ಕೋಟೆ ಹಾಗೂ ದಕ್ಷಿಣದಲ್ಲಿ ರಣಮಂಡಲ ಕೋಟೆ ಇದೆ. ರಾಷ್ಟ್ರಕೂಟರು, ವಿಜಯನಗರದರಸರು ಮತ್ತು ಟಿಪ್ಪೂಸುಲ್ತಾನರ ಕಾಲದಲ್ಲಿ ಈ ಕೋಟೆ ವಿಸ್ತರಿಸಿದ ಎನ್ನುತ್ತದೆ ಇತಿಹಾಸ.
   ಕಲೋಪಾಸಕರಿಗೆ ರಮಣೀಯ ತಾಣವಾಗಿ, ಶಾಸನಾಧ್ಯಯನಿಗಳಿಗೆ ಆಕರವಾಗಿ, ಆಸ್ತಿಕರಿಗೆ ಪುಣ್ಯಕ್ಷೇತ್ರವಾಗಿರುವ ಬಾದಾಮಿ ಕರುನಾಡ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಬೆಂಗಳೂರಿನಿಂದ ಬಾದಾಮಿಗೆ 420 ಕಿಲೋ ಮೀಟರ್. 
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಭಾನುವಾರ, ಜನವರಿ 11, 2015

ಸಲಹೆಗಳಲ್ಲ ಇದು ಬದುಕು

1) ಒಪ್ಪಿಗೆ ಎನ್ನುವುದನ್ನು ಕೊಡುವಾಗಲೇ ಯೋಚಿಸಬೇಕು. ಒಪ್ಪಿದ ನಂತರವೂ ಯೋಚಿಸುವುದು ನಿಲುವಿಲ್ಲದ್ದರ ಲಕ್ಷಣ

2) ಸೃಷ್ಟಿಯಲ್ಲಿ ಒಳ್ಳೆಯದು, ಕೆಟ್ಟದ್ದು ಎಂದಿಲ್ಲ. ಆದರೆ, ಹಾಗೆ ನಿರ್ಧರಿಸಬಲ್ಲ ಸ್ವಭಾವ ಇದೆ. ಅದನ್ನು ಹೇಗೆ ಪಳಗಿಸುತ್ತೀರೆಂಬುದು ಮುಖ್ಯ.

3) ಎಲ್ಲ ಸಂಗತಿಗಳೂ ತರ್ಕವನ್ನೇ ಅನ್ವಯಿಸಹೊರಟರೆ ಬುದ್ಧಿಗೆ ರಂಜನೆ ಸಿಗಬಹುದು. ಆದರೆ, ಮನಸ್ಸು ಆನಂದ ಕಳೆದುಕೊಳ್ಳುತ್ತದೆ.

4) ಸ್ವಾರ್ಥವೇ ಜಗತ್ತಿನ ಪ್ರವರ್ತಕ ಎಂಬ ಸತ್ಯವನ್ನು ಒಪ್ಪಿಕೊಳ್ಳುವ ತನಕ ಪರಾರ್ಥ ಎಂಬುದು ಅಪಾರ್ಥಗೊಂಡಿದೆ ಎಂತಲೇ ಅರ್ಥ.

5) ಬೇಯದೇ ಅಕ್ಕಿ ಅನ್ನವಾಗದು, ಮಾಗದೇ ಫಲ ಸಿಹಿ ಎನಿಸದು. ಬೇಯುವುದು ಮತ್ತು ಮಾಗುವುದು ಇವರೆರಡರಲ್ಲೇ ಇದೆ ಜೀವನ.

6) ಗಳಿಸುವುದು ಮುಖ್ಯ. ಉಳಿಸುವುದು ಅತಿಮುಖ್ಯ. ಗಳಿಕೆ ಮತ್ತು ಉಳಿಕೆಯ ಸಾರ್ಥಕ್ಯ ಮಾತ್ರ ನೀಡಿಕೆಯಲ್ಲೇ.

7) ಉತ್ತರ ಯೋಚನೆಗಳು ವ್ಯಕ್ತಿಯನ್ನು ರೂಪಿಸುತ್ತವೆ. ಉತ್ತಮ ವ್ಯಕ್ತಿಗಳು ಉತ್ತಮ ಯೋಚನೆಗಳನ್ನೇ ರೂಪಿಸುತ್ತಾರೆ.

8) ತಿಳಿವಳಿಕೆಯ ಅಳಲನ್ನು ಅಳೆಯುವ ಅಳತೆಗೋಲು ಯಾವುದೆಂದರೆ, ಸಂದರ್ಭಗಳಿಗೆ ಆತನ ಪ್ರತಿಕ್ರಿಯೆಯೇ ಆಗಿರುತ್ತದೆ.

9) ನಿಷ್ಠೆ ಎಂಬುದು ಸಾಪೇಕ್ಷವಲ್ಲ. ಅದು ಯಾವುದೋ ಅಪೇಕ್ಷೆಯ ಹೊರತಾಗಿಯೂ ಒಡಮೂಡುವ ನಿರಪೇಕ್ಷ ಭಾವ.

10) ಶ್ರದ್ಧೆ, ಶ್ರಮ ಇವೆರಡೂ ಇತರರು ಕಾಪಿ ಮಾಡಲಾಗದ ಸಂಗತಿ.

11) ಕೃತಜ್ಞತೆ ಎಂಬುದು ಉಪಕಾರವನ್ನು ತೀರಿಸುವ ಸಾಧನವಂತೂ ಅಲ್ಲ. ಬದಲಿಗೆ ಅದಕ್ಕೆ ಕೊಡುವ ಗೌರವ ಅಷ್ಟೇ.

12) ಪ್ರವಾಹದ ದಿಕ್ಕಿನಲ್ಲಿ ಸಾಗಲು ಹೆಚ್ಚೇನೂ ಶ್ರಮ ಬೇಕಿಲ್ಲ. ಪ್ರವಾಹದ ಅಭಿಮುಖ ಈಜುವುದಕ್ಕೆ ಬಲ, ಸ್ಥೈರ್ಯ, ಇಚ್ಛಾಶಕ್ತಿ ಬೇಕು.

13) ಪ್ರಾಮಾಣಿಕತೆ ಎಂದರೆ ಅದರ ಅನಿವಾರ್ಯ ಇಲ್ಲ ಎನಿಸುವಂಥ ಸಂದರ್ಭದಲ್ಲೂ ಅದನ್ನು ತೊರೆಯದಿರುವುದು.

14) ಹೋಲಿಕೆಗೆ ಎರಡು ಸಮಾನ ವಸ್ತುಗಳು ಬೇಕು. ಆದರೆ ಎರಡು ಮತ್ತು ಸಮಾನ ಇವೆರಡೂ ಶಬ್ದಗಳೂ ನಿಜದಲ್ಲಿ ಒಟ್ಟಿಗೇ ಇರಲು ಸಾಧ್ಯವಿಲ್ಲ. ಹಾಗಾಗಿ ಹೋಲಿಕೆ ಎಂಬುದು ಅರ್ಥರಹಿತ.

15) ವಾಸ್ತವ ವಸ್ತುನಿಷ್ಠವಾದದ್ದೇ ಹೊರತೂ ವ್ಯಕ್ತಿನಿಷ್ಠ ಅಲ್ಲ. ಹಾಗಾಗಿ ವಾಸ್ತವ ಯಾವತ್ತೂ ಒಂದೇ. ಮೀರುವುದನ್ನೇ ಗುರಿಯಾಗಿಟ್ಟುಕೊಂಡರೆ ಎಲ್ಲ ಗುರಿ ದಾಟಬಹುದು. ಸ್ವತಃ ಮೀರುವಿಕೆಯನ್ನೂ.
                                                         - ವಿಶ್ವನಾಥ ಸುಂಕಸಾಳ, ಕನ್ನಡಪ್ರಭ

ಎಸ್ ಫ್ರಾಯ್ಡ್


ಎಸ್ ವಿವೇಕಾನಂದ

ಶನಿವಾರ, ಜನವರಿ 10, 2015

ನುಡಿಮುತ್ತು 18

ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು

ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು
ಮಹಾತ್ಮಾ ಗಾಂಧಿ


ಹೊಗೆ-ಎಂಜಿನ್ ಪೋಪೊಪೆಡೆ,ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ,ಚರ್ಚಿಲನ ಚುಟ್ಟ.
— ಬಿಳಿಗಿರಿ

ಗುರುವಾರ, ಜನವರಿ 08, 2015

ನಾಯಿ ಗಣತಿ ?

ನಾಯಿಗಳ ಗನತಿ ಮಾಡಿ, ಒಟ್ಟು ಸಂಖ್ಯೆ ತಿಳಿಸಿ.

ಶುಕ್ರವಾರ, ಜನವರಿ 02, 2015

ಡಿಸೆಂಬರ ಜ್ಞಾನ 6

1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು?
2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು?
3. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು?
4. ಸಿಂಧೂ ನಾಗರೀಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು?
5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?
6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
7. ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು?
8. ಭಾರತದ ಮೊದಲ ವಾಕ್ ಚಿತ್ರ ಯಾವುದು?
9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ ಯಾರು?
10. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು?
11. ಮಿಸ್‍ವಲ್ರ್ಡ್ ಆದ ಪ್ರಥಮ ಭಾರತೀಯ ಮಹಿಳೆ ಯಾರು?
12. ಪಂಚತಂತ್ರಗಳನ್ನು ಬರೆದವರು ಯಾರು?
13. ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು?
14. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಯಾರು?
15. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಮಹಿಳೆ ಯಾರು?
16. ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು?
17. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾಧ್ಯಕ್ಷೆ ಯಾರು?
18. ಭಾರತದ ರಾಷ್ಟ್ರೀಯ ಹಾಡು ಯಾವುದು?
19. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
20. ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್ ಯಾರು?
21. ದಂಡಯಾತ್ರೆ ಎಲ್ಲಿಂದ ಪ್ರಾರಂಭಿಸಲಾಯಿತು?
22. ಅಭಿನವ ಭಾರತದ ಸ್ಥಾಪಕನ್ಯಾರು?
23. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷ ಯಾರು?
24. ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?
25. ಮಹಾಭಾರತದ ಕರ್ತೃ ಯಾರು?
26. ಮಹಂಜೋದಾರೊ ಪದದ ಅರ್ಥವೇನು?
27. ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ ಮೊಗಲ್ ದೊರೆ  ಯಾರು?
28. ಪ್ರಾಚೀನ ಭಾರತದ ರಾಜಧಾನಿ ನಗರ ಯಾವುದು?
29. ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?

       ಉತ್ತರಗಳು

ಗುರುವಾರ, ಜನವರಿ 01, 2015

ಟಾಪ್ - 3 ಡಿಸೆಂಬರ್- 2014

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಡಿಸೆಂಬರ್- 2014

ಪ್ರಕಟನೆಗಳ ವೀಕ್ಷಣೆ ಟಾಪ್ 3 
  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 

Chrome

Firefox

Internet Explorer


ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3 

Windows

Android

Other Unix

ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ

                                            Windows XP
                                            Windows 7
                                          Nokia Phones
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,438

ಸಿರಿ ದೇವಿ ಕನ್ನಡ